ಮಡಿಕೇರಿ, ಸೆ. 7: ಕೊಡಗು ಜಿಲ್ಲಾ ಪಂಡಿತ ಸಂಘಟನೆಯಾದ ಕೂರ್ಗ್ ಜಂಇಯ್ಯತುಲ್ ಉಲಮಾದ ವಾರ್ಷಿಕ ಮಹಾಸಭೆ ಹಾಗೂ ಅಗಲಿದ ಪಂಡಿತ ಅಬ್ಬಾಸ್ ಉಸ್ತಾದ್ ಅವರ ಸ್ಮರಣೆ ಕಾರ್ಯಕ್ರಮ ತಾ. 12 ರಂದು ನಡೆಯಲಿದೆ.
ಕೊಂಡಂಗೇರಿಯ ಶಾದಿ ಮಹಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್ ವಹಿಸಲಿದ್ದಾರೆ. ಸಂಸ್ಥೆಯ ಕೋಶಾಧಿಕಾರಿ ಕೆ.ಎಂ. ಹುಸೈನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಿ.ಪಿ. ಮಜೀದ್ ಮದನಿ ಪ್ರಾಸ್ತಾವಿಕ ನುಡಿಯಾಡಲಿದ್ದಾರೆ. ಸೆಯ್ಯದ್ ಶಹಾಬುದ್ದೀನ್ ತಂಞಳ್ ಕಿಲ್ಲೂರು, ಸಯ್ಯಿದ್ ಇಲ್ಯಾಸ್ ತಂಞಳ್ ಎಮ್ಮೆಮಾಡು, ಉಡುಪಿ ಖಾಝಿ ಬೇಕಲ, ಇಬ್ರಾಹಿಂ ಮುಸ್ಲಿಯಾರ್, ಕೆ.ಎಸ್. ಶಾದುಲಿ ಫೈಝಿ, ಉಮರ್ ಸಖಾಫಿ, ಆಶ್ರಫ್ ಅಹ್ಸನಿ ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.