ಮಡಿಕೇರಿ, ಸೆ. 7: ಕೊಡಗು ಜಿಲ್ಲೆಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸುವ ವಿಚಾರವಾಗಿ, ಜಿಲ್ಲಾ ಮಟ್ಟದ “ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಆಗಸ್ಟ್ 6 ರಂದು ನಡೆದ ಮೇಲುಸ್ತುವಾರಿ ಸಮಿತಿ ಸಭೆಯ ನಿರ್ಣಯದಂತೆ ದುಬಾರೆ ಪ್ರದೇಶದ ಕಾವೇರಿ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆ, ಅರ್ಜಿ ಯೊಂದಿಗೆ ಸಲ್ಲಿಸಬೇಕಾದ ದಾಖಲಾತಿ ಗಳು, ರ್ಯಾಫ್ಟಿಂಗ್ ನಡೆಸಲು ಸಮಿತಿಯು ನಿಗದಿಪಡಿಸಿರುವ ಮಾರ್ಗಸೂಚಿಗಳಂತೆ ಹಾಗೂ ನಿಬಂಧನೆಗಳ ವಿವರಗಳನ್ನು hಣಣಠಿ://ತಿತಿತಿ.ಞoಜಚಿgu.ಟಿiಛಿ.iಟಿ ನಲ್ಲಿ ಪ್ರಕಟಿಸಲಾಗಿದೆ. ತಾಂತ್ರಿಕ ಸಮಿತಿಯ ವರದಿಯಂತೆ 12 ಅರ್ಜಿದಾರರಿಗೆ ಪರವಾನಿಗೆ ನೀಡಲು ಅವಕಾಶವಿದ್ದು ಆಸಕ್ತರು ಅರ್ಜಿಗಳನ್ನು ವೆಬ್‍ಸೈಟ್‍ನಿಂದ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸ್ಟಿವರ್ಟ್ ಹಿಲ್, ಮಡಿಕೇರಿ ಇವರಿಗೆ ಸೆಪ್ಟೆಂಬರ್, 12 ರ ಸಂಜೆ 5 ಗಂಟೆಯೊಳಗೆ ಸಲ್ಲಿಸುವದು. ಪ್ರಸಕ್ತ ವರ್ಷದ ಅಂತಿಮ ಪ್ರಕಟಣೆಯಾಗಿದ್ದು ಅಪೂರ್ಣ ದಾಖಲಾತಿಗಳನ್ನು ಸ್ವೀಕರಿಸಲಾಗುವದಿಲ್ಲ. ಹೆಚ್ಚಿನ ವಿವರಗಳಿಗೆ ಕೊಡಗು ಜಿಲ್ಲಾ ವೆಬ್‍ಸೈಟ್ hಣಣಠಿ://ತಿತಿತಿ.ಞoಜಚಿgu. ಟಿiಛಿ.iಟಿ ಅಥವಾ ದೂರವಾಣಿ ಸಂಖ್ಯೆ:08272-228580 ನ್ನು ಸಂಪರ್ಕಿಸಬಹುದು ಎಂದು ಸಹಾಯಕ ನಿರ್ದೇಶಕರು ಹಾಗೂ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.