*ಗೋಣಿಕೊಪ್ಪಲು, ಸೆ. 7: ಮಾಯಮುಡಿ ಗ್ರಾಮದ ಚೆಪ್ಪುಡೀರ ರಾಧ ಅಚ್ಚಯ್ಯ ಅವರ ತೋಟ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಆಶೋಕ್ (40) ಎಂಬವರು ಮೃತಪಟ್ಟಿದ್ದು, ಮೃತರ ವಾರೀಸುದಾರರು ಯಾರಾದರು ಇದ್ದಲ್ಲಿ ಮೃತದೇಹವನ್ನು ಪಡೆದುಕೊಳ್ಳಬೇಕೆಂದು ಗೋಣಿಕೊಪ್ಪಲು ಪೆÇಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಮಾಯಮುಡಿ ರಾಧ ಅಚ್ಚಯ್ಯ ಅವರ ಮನೆಯಲ್ಲಿ ತೋಟ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಅಶೋಕ್ ಅವರ ಸಂಬಂಧಿಕರಾರು ಕೂಡ ಈತನ ಭೇಟಿಗೆ ಕಳೆದ ಎರಡು ವರ್ಷಗಳಲ್ಲಿ ಬಂದಿರಲಿಲ್ಲ. ಇವರ ಸಂಬಂಧಿಕರು ಇದ್ದಲ್ಲಿ ತಕ್ಷಣವೇ ಗೋಣಿಕೊಪ್ಪಲು ಪೆÇಲೀಸ್ ಠಾಣೆಯನ್ನು ದೂ. 08274-247333 ಮತ್ತು 247209 ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.