ಸಂಪಾಜೆ, ಸೆ. 7: ಮಡಿಕೇರಿ ಗಡಿಭಾಗದ ಅರೆಕಲ್ಲು ಪ್ರದೇಶದ ಕೊಪ್ಪರಿಗೆ ಗುಡ್ಡೆ ಎಂಬ ಪ್ರದೇಶದಲ್ಲಿ ಭೂ ಕುಸಿತದಿಂದ ದೊಡ್ಡ ಬಂಡೆಕಲ್ಲು ಉರುಳಿ ಬಿದ್ದಿರುವದು ಸ್ಥಳೀಯರ ಗಮನಕ್ಕೆ ಬಂದಿದೆ. ಆದರೆ ಯಾವದೇ ಅಪಾಯ ಕಂಡುಬಂದಿಲ್ಲ. ಬಂಡೆ ಉರುಳುವಾಗ ದೊಡ್ಡ ಸದ್ದು ಕೇಳಿ ಬಂದಿದೆ. ಬಂಡೆ ಕಲ್ಲು ಉರುಳುವಾಗ ಕೆಲವು ಮರಗಳು ಬಿದ್ದಿದೆ ಹೀಗಾಗಿ ಇನ್ನಷ್ಟು ಸದ್ದು ಕೇಳಿದೆ, ರಸ್ತೆ ಸಂಪರ್ಕ ಹಾಗೂ ಜನರಿಗೆ ಯಾವದೇ ತೊಂದರೆ ಉಂಟಾಗಲಿಲ್ಲ.