ವೀರಾಜಪೇಟೆ, ಸೆ.7: ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ತಾ.8ರಂದು (ಇಂದು) ಅಪರಾಹ್ನ 3 ಗಂಟೆಗೆ ವಾಯ್ಸ್ ಆಫ್ ವೀರಾಜಪೇಟೆ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಖ್ಯಾತ ಹಿನ್ನೆಲೆ ಗಾಯಕಿ ಬೆಂಗಳೂರಿನ ಸಮನ್ನವಿತಾ ಶರ್ಮ ಈ ಸ್ಪರ್ಧೆಯನ್ನು ನಡೆಸಲಿದ್ದು ಗೌರಿ ಗಣೇಶ ಉತ್ಸವ ಸಮಿತಿ ಹಾಗೂ ಎನ್.ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗದೊಂದಿಗೆ ಸಂಗೀತ ಸ್ಪರ್ಧೆ ನಡೆಯಲಿದೆ.