ಮಡಿಕೇರಿ, ಸೆ. 7: ಅಖಿಲ ಕೊಡವ ಸಮಾಜದ 2019ನೇ ಸಾಲಿನ ಮಹಾಸಭೆ ತಾ. 13 ರಂದು ಬೆಳಿಗ್ಗೆ 10.30 ಕ್ಕೆ ಸಮಾಜದ ಅಧ್ಯಕ್ಷ ಹಾಗೂ ದೇಶತಕ್ಕರಾದ ಮಾತಂಡ ಸಿ. ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವೀರಾಜಪೇಟೆಯ ಸಮಾಜದ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಅವರು ಪಾಲ್ಗೊಳ್ಳಲಿದ್ದಾರೆಂದು ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ ತಿಳಿಸಿದ್ದಾರೆ.