ಮಡಿಕೇರಿ, ಸೆ. 7: ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ.ಯ ವಾರ್ಷಿಕ ಪರೀಕ್ಷೆಯಲ್ಲಿ ಶೇ. 90 ಕ್ಕೂ ಹೆಚ್ಚು ಅಂಕಗಳನ್ನು ಪಡೆದ, ಸೊಸೈಟಿಯ ಸದಸ್ಯರುಗಳ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಗುತ್ತದೆ.

ಅರ್ಹರಾದ ಪ್ರತಿಭಾವಂತ ವಿದ್ಯಾರ್ಥಿಗಳು ತಾವು ಪಡೆದ ಅಂಕಪಟ್ಟಿಯ ಪ್ರತಿ ಹಾಗೂ ಆಧಾರ್ ಕಾರ್ಡ್‍ನ ಪ್ರತಿ ಮತ್ತು ತಮ್ಮ ಪೋಷಕರ ಸೊಸೈಟಿಯ ಸದಸ್ಯತನ ನಂಬರ್ ಹಾಗೂ ಸ್ವವಿವರ ಅರ್ಜಿಯನ್ನು ತಾ. 10 ರೊಳಗಾಗಿ ಸಂಘದ ಪ್ರಧಾನ ಕಚೇರಿ ಸುಳ್ಯ, ಮಡಿಕೇರಿ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಕಡಬ, ಮಂಗಳೂರು, ಬಿ.ಸಿ. ರೋಡ್, ಮೈಸೂರು, ಸಕಲೇಶಪುರ ಶಾಖೆಗಳ ಶಾಖಾ ವ್ಯವಸ್ಥಾಪಕರಿಗೆ ಸಲ್ಲಿಸಬಹುದು. ಪುರಸ್ಕಾರವನ್ನು ತಾ. 21 ರಂದು ನಡೆಯುವ ಸೊಸೈಟಿಯ ಮಹಾಸಭೆಯಲ್ಲಿ ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು (9448464593, 08257-231256, ಮಡಿಕೇರಿ ಶಾಖೆ: 225256) ಸಂಪರ್ಕಿಸಬೇಕೆಂದು ಸೊಸೈಟಿಯ ಅಧ್ಯಕ್ಷ ಕೆ.ಸಿ. ನಾರಾಯಣ ಗೌಡರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.