ಶ್ರೀಮಂಗಲ, ಸೆ. 7: ಪೊನ್ನಂಪೇಟೆ ಎಸ್.ಬಿ.ಐ. ಬ್ಯಾಂಕಿನಲ್ಲಿ ಬೆಳೆಗಾರರೋರ್ವರ ಎಫ್.ಡಿ. ಹಣವನ್ನು ಅವಧಿ ವಿಕಾಸನಗೊಂಡರೂ ಮರುಪಾವತಿಸಲು ನಿರಾಕರಿಸುತ್ತಿರುವ ಬ್ಯಾಂಕ್‍ನ ಧೋರಣೆಯನ್ನು ಖಂಡಿಸಿ ತಾ.09 ರಂದು ಕೊಡಗು ಬೆಳೆಗಾರರ ಒಕ್ಕೂಟ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ, ಜಿಲ್ಲಾ ರೈತ ಸಂಘ ಹಸಿರು ಸೇನೆ ಮತ್ತು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಜಂಟಿಯಾಗಿ ಬ್ಯಾಂಕ್‍ನ ಎದುರು ಹಮ್ಮಿಕೊಂಡಿರುವ ಪ್ರತಿಭಟನೆಗೆ ಭಾರತೀಯ ಕಿಸಾನ್ ಸಂWದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್‍ಬೋಪಯ್ಯ ಮತ್ತು ಬಿ-ಶೆಟ್ಟಿಗೇರಿಯ ಕುತ್ತ್‍ನಾಡ್ ಮತ್ತು ಬೇರಳಿನಾಡ್ ಬೆಳೆಗಾರರ ಸಂಘದ ಸಂಚಾಲಕ ಮದ್ರೀರ ಗಿರೀಶ್ ಅವರು ತಮ್ಮ ಸಂಘಟನೆಗಳ ಬೆಂಬಲ ವ್ಯಕ್ತಪಡಿಸಿದ್ದಾರೆ.