ವೀರಾಜಪೇಟೆ, ಸೆ. 7: ವೀರಾಜಪೇಟೆ ನಗರದ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿವಾರದ ಹನ್ನೊಂದನೇ ಕಾವ್ಯಗೋಷ್ಠಿಯು ತಾ. 8 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಕಾರ್ಯಕ್ರಮ ದಲ್ಲಿ ಕವನ ವಾಚನ, ಗೀತಗಾಯನ, ಕುಂಚ ಗಾಯನ, ಇನ್ನಿತರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಸಂಚಾಲಕ ಪಿ.ಎಸ್. ವೈಲೇಸ್ ತಿಳಿಸಿದ್ದಾರೆ.