ಮಡಿಕೇರಿ, ಸೆ. 7: ಭಾರೀ ಗಾಳಿ, ಮಳೆಗೆ ಮದೆ ಗ್ರಾ.ಪಂ. ವ್ಯಾಪ್ತಿಯ ಜೋಡುಪಾಲ ನಿವಾಸಿ ನಂಗಾರು ನವೀನ ಅವರು ನೂತನವಾಗಿ ನಿರ್ಮಿಸಿದ ಮನೆ ಬದಿ ಮಣ್ಣು ಕುಸಿದು ಮನೆಗೆ ಹಾನಿಯಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಅಪಾಯದ ಸ್ಥಿತಿಯಲ್ಲಿದೆ.