ಶನಿವಾರಸಂತೆ, ಸೆ. 6: ಶನಿವಾರಸಂತೆ ಸಮೀಪದ ತ್ಯಾಗರಾಜ ಕಾಲೋನಿಯ ಪರಿಶಿಷ್ಟ ಜಾತಿಯ ಶಾರದಮ್ಮ ಪಾಪಯ್ಯ ಅವರ ಮನೆಯ ಹಿಂಬದಿ ಶೇ. 50 ಭಾಗ ಕುಸಿದು ನಷ್ಟ ಸಂಭವಿಸಿದೆ. ಮನೆಯ ಮಣ್ಣಿನಗೋಡೆ ಒಳಭಾಗಕ್ಕೆ ಬಿದ್ದ ಪರಿಣಾಮ ಮನೆಯ ಒಳಗಿನ ಹಲವು ಸಾಮಗ್ರಿಗಳು ಜಖಂಗೊಂಡಿವೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗ ಬಿ.ಆರ್. ಮಂಜುನಾಥ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶನಿವಾರಸಂತೆ ಹೋಬಳಿಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 1505.02 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಳೆ 2907.9 ಮಿ.ಮೀ. ಮಳೆಯಾಗಿತ್ತು ಎಂದು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ರುದ್ರಯ್ಯ ಹಾಗೂ ಮಂಜುನಾಥ್ ಪತ್ರಿಕೆಗೆ ತಿಳಿಸಿದ್ದಾರೆ.