ಸಿದ್ದಾಪುರ, ಸೆ. 6: ಪ್ರವಾಹ ಪೀಡಿತ ಕರಡಿಗೋಡು, ಗುಹ್ಯ ಹಾಗೂ ಕೊಂಡಂಗೇರಿ ಗ್ರಾಮಗಳಿಗೆ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಭೇಟಿ ನೀಡಿ ಕುಸಿದಿರುವ ಹಾಗೂ ಹಾನಿಗೊಳಗಾಗಿರುವ ಮನೆಗಳನ್ನು ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನದಿ ತೀರದಲ್ಲಿ ವಾಸಿಸುತ್ತಿರುವ ನಿವಾಸಿಗಳು ಪ್ರತಿ ವರ್ಷವೂ ಪ್ರವಾಹದ ಸಂದರ್ಭ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ನದಿ ತೀರದಿಂದ ತೆರವುಗೊಳಿಸಿ, ಸರಕಾರವು ಶಾಶ್ವತ ಸೂರನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು. ನೆರೆಪೀಡಿತದಿಂದಾಗಿ ಹಾನಿಗೊಳಗಾದ ನದಿ ತೀರದ ಎಲ್ಲಾ ನಿವಾಸಿಗಳ ಮನೆಗಳನ್ನು ವೀಕ್ಷಿಸಿ, ವಿಷಾದ ವ್ಯಕ್ತಪಡಿಸಿದ ಅವರು, ಪ್ರತಿ ಕುಟುಂಬಕ್ಕೂ ತಲಾ 1 ಮಂಚವನ್ನು ನೀಡುವದಾಗಿ ತಿಳಿಸಿದರು.
ಈ ಸಂದರ್ಭ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಸಯ್ಯದ್ ಬಾವ, ಸುಂಟಿಕೊಪ್ಪ ಉಸ್ಮಾನ್ ಹಾಜರಿದ್ದರು.