ಮಡಿಕೇರಿ, ಸೆ. 6: ಐತಿಹಾಸಿಕ ಮಡಿಕೇರಿ ನಗರದ ದಸರಾ ಸಮಿತಿಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ತಾ.6ರಂದು ಜಿಲ್ಲಾಧಿಕಾರಿ ಹಾಗೂ ದಸರಾ ಸಮಿತಿಯ ಅಧ್ಯಕ್ಷರಾದ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು.ದಸರಾ ಸಮಿತಿ ಕಾರ್ಯಾಧ್ಯಕ್ಷರಾಗಿ ರಾಬಿನ್ ದೇವಯ್ಯ ಅವರು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ ಜಗದೀಶ್ಹಾ ಗೂ ಖಜಾಂಚಿಯಾಗಿ ಉಮೇಶ್ ಸುಬ್ರಮಣಿ ಒಮ್ಮತವಾಗಿ ಆಯ್ಕೆಗೊಂಡರು. ಸಮಿತಿಗೆ ಇತರ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿ; ಉಪಾಧ್ಯಕ್ಷರುಗಳಾಗಿ ಅರುಣ್ ಕುಮಾರ್ ಬಿ.ಕೆ., ಉದಯಕುಮಾರ್ ಟಿ.ಹೆಚ್., ಪ್ರಭು ರೈ, ನೆರವಂಡ ಜೀವನ್, ರಾಕೇಶ್ ಬಿ.ಎಂ., ಅನಿತಾ ಪೂವಯ್ಯ, ಅರುಣ್ ಶೆಟ್ಟಿ ಇವರುಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಸಮಿತಿಯ ಕಾರ್ಯದರ್ಶಿ ಯಾಗಿ ಗಜೇಂದ್ರ (ಕುಶ) ಹಾಗೂ ಸಂಗೀತ ಪ್ರಸನ್ನ ಅವರನ್ನು ನೇಮಕ ಮಾಡಲಾಯಿತು.

ಸಹಕಾರ್ಯದರ್ಶಿಗಳಾಗಿ ಬಿ.ವಿ. ರೋಷನ್, ಅಶ್ರಫ್ ಕೆ.ಯು., ಎಸ್.ಸಿ. ಸತೀಶ್ ಹಾಗೂ ಬಿ.ಪಿ. ಡಿಶು ಅವರನ್ನು ನೇಮಿಸಿಕೊಳ್ಳಲಾಯಿತು.

ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾಗಿ ಆರ್.ಬಿ. ರವಿ, ಕ್ರೀಡಾ ಸಮಿತಿ ಅಧ್ಯಕ್ಷರಾಗಿ ಬಿ.ಎಂ. ಹರೀಶ್, ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಚಿ.ನಾ. ಸೋಮೇಶ್, ವೇದಿಕೆ ಸಮಿತಿಯ ಅಧ್ಯಕ್ಷರಾಗಿ ಎ.ಜಿ ರಮೇಶ್, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮೊಣ್ಣಪ್ಪ ಕಾನೆಹಿತ್ಲು

(ಮೊದಲ ಪುಟದಿಂದ) ಹಾಗೂ ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಸಿ. ಕೆ ನಂದೀಶ್ ಅವರುಗಳನ್ನು ನೇಮಿಸಿಕೊಳ್ಳಲಾಯಿತು. ಸಮಿತಿಯ ನೂತನ ಗೌರವ ಅಧ್ಯಕ್ಷರುಗಳಾಗಿ ಹಿರಿಯರಾದ ಎಂ.ಬಿ. ದೇವಯ್ಯ, ಎಸ್.ಸಿ. ಸುಬ್ರಮಣಿ, ಕಾವೇರಮ್ಮ ಸೋಮಣ್ಣ, ಜಿ ಚಿದ್ವಿಲಾಸ್, ಜಿ.ಎಂ. ಸತೀಶ್ ಪೈ, ಪಿ.ಡಿ. ಪೊನ್ನಪ್ಪ, ಮಹೇಶ್ ಜೈನಿ, ಟಿ.ಪಿ ರಾಜೆಂದ್ರ, ಪತ್ರಕರ್ತ ಸಂಘದ ಅಧ್ಯಕೆÀ್ಷ ಸವಿತಾ ರೈ ಇವರುಗಳನ್ನು ನೇಮಿಸಿಕೊಳ್ಳಲಾಯಿತು.

ಸಮಿತಿಗೆ ಪೋಷಕರಾಗಿ ಹಿರಿಯ ಅರ್ಚಕ ಮಧುರಯ್ಯನವರನ್ನು ನೇಮಿಸಿಕೊಳ್ಳಲಾಯಿತು. ಸಮಿತಿಗೆ ವಿಶೇಷ ಆಹ್ವಾನಿತರಾಗಿ ಚುಮ್ಮಿ ದೇವಯ್ಯ, ರಮೇಶ್ ಕೆ.ಎಸ್, ಟಿ.ಎಸ್ ಪ್ರಕಾಶ್, ಪಿ.ಜಿ. ಮಂಜುನಾಥ್, ಪಿ.ಟಿ ಉಣ್ಣಿಕೃಷ್ಣ, ಎ.ಎಸ್. ಪ್ರಕಾಶ್ ಆಚಾರ್ಯ, ಉಸ್ಮಾನ್, ಹಾಗೂ ಬೈಶ್ರೀ ಪ್ರಕಾಶ್ ಅವರರುಗಳನ್ನು ನೇಮಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಹಾಪೋಷಕರಾದ ಡಾ|| ಸುಮನ್ ಡಿ.ಪಿ. ಹಾಗೂ ನಗರಸಭೆಯ ಪೌರಾಯುಕ್ತರು ಹಾಗೂ ನಗರ ದಸರಾ ಸಮಿತಿಯ ಗೌರವ ಕಾರ್ಯದರ್ಶಿ ಎಂ.ಎಲ್. ರಮೇಶ್ ಮತ್ತು ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕಿ ದರ್ಶನ್ ಕೆ.ಟಿ., ಕರಗ ಸಮಿತಿಯ ಪ್ರತಿನಿಧಿಗಳು, ದಶಮಂಟಪ ಸಮಿತಿಯ ಅಧ್ಯಕ್ಷ ರಂಜಿತ್ ಕುಮಾರ್ ಹಾಗೂ ದೇವಾಲಯ ಸಮಿತಿಯ ಸದಸ್ಯರುಗಳು, ದಶಮಂಟಪ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.