ಸುಂಟಿಕೊಪ್ಪ, ಸೆ. 5: ಇಲ್ಲಿನ ಆಸ್ಪತ್ರೆ ರಸ್ತೆಯ ರಾಮ ಮಂದಿರ ಕಟ್ಟಡದ ಎದುರು ಭಾಗ ಮತ್ತು ಪೊಲೀಸ್ ಠಾಣೆ ಒತ್ತಿನಲ್ಲಿ ಬೇಲಿಯನ್ನು ಪಂಚಾಯಿತಿ ವತಿಯಿಂದ ಕಡಿದು ರಸ್ತೆ ಬದಿಯಲ್ಲಿ ರಾಶಿ ಹಾಕಲಾಗಿದ್ದು, ಕಳೆದ 15 ದಿನಗಳಿಂದ ಈ ತ್ಯಾಜ್ಯವನ್ನು ತೆರವುಗೊಳಿಸದೆ ಮಳೆಗೆ ಕೊಳೆತು ನಾರುತ್ತಿದ್ದು, ಸೊಳ್ಳೆಗಳ ವಾಸ ಸ್ಥಾನವಾಗಿದೆ.
ಡೆಂಗ್ಯೂ, ಚಿಕನ್‍ಗುನ್ಯ, ಮಲೇರಿಯ ಕಾಯಿಲೆಯಿಂದ ಜನತೆ ಭಯಭೀತಿ ಯಲ್ಲಿದ್ದು, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರಿಗೆ ಈ ಬಗ್ಗೆ ಯಾವದೇ ಚಿಂತೆ ಇಲ್ಲ. ಕೂಡಲೇ ಇಲ್ಲಿ ಕಡಿದು ರಾಶಿ ಹಾಕಿರುವ ಬೇಲಿಯ ಕಸವನ್ನು ತೆರವುಗೊಳಿಸಿ ಮುಂದಾಗುವ ಅನಾಹುತದಿಂದ ಪಾರು ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.