ಗೋಣಿಕೊಪ್ಪ ವರದಿ, ಸೆ. 5: ಇಲ್ಲಿನ ಕಾವೇರಿ ಕಾಲೇಜು ಸಭಾಂಗಣದಲ್ಲಿ ಕಾವೇರಿ ಕಾಲೇಜು ಹಾಗೂ ಹಳೇ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ತಾ. 6 ರಂದು (ಇಂದು) ನಡೆಯಬೇಕಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಮಳೆಯ ಕಾರಣ ರದ್ದು ಪಡಿಸಲಾಗಿದೆ. ಮುಂದಿನ ದಿನಾಂಕ ನಿಗದಿ ಪಡಿಸಿ ನಡೆಸಲಾಗುವದು ಎಂದು ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.