ನಾಪೆÉÇೀಕ್ಲು, ಸೆ. 5: ತಾ. 6ರಂದು (ಇಂದು) ನಾಪೆÉÇೀಕ್ಲು ಪಟ್ಟಣ ವ್ಯಾಪ್ತಿಯ ಐದು ಕಡೆಗಳಲ್ಲಿ ವಿವಿಧ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು ಏಕ ಕಾಲದಲ್ಲಿ ವಿಸರ್ಜಿಸುತ್ತಿರುವ ಕಾರಣ ನಾಪೆÇೀಕ್ಲು ಪಟ್ಟಣದಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ರವರೆಗೆ ಎಲ್ಲಾ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗಣೇಶ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನೆ ನಡೆಯುವದರಿಂದ ಪಟ್ಟಣದಲ್ಲಿ ವಾಹನ ನಿಲುಗಡೆಗೊಳಿಸಿದ್ದಲ್ಲಿ ಸಂಚಾರಕ್ಕೆ ಅಡಚಣೆ ಆಗುವ ನಿಟ್ಟಿನಲ್ಲಿ ಎಲ್ಲಾ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ವಾಹನಗಳನ್ನು ಪೆÇಲೀಸ್ ಮೈದಾನ, ಆಸ್ಪತ್ರೆ ಮೇಲ್ಭಾಗದ ಮೈದಾನ, ಕೊಡವ ಸಮಾಜ ರಸ್ತೆಯಲ್ಲಿ ನಿಲುಗಡೆ ಗೊಳಿಸಬೇಕು. ಹಳೇತಾಲೂಕು ರಸ್ತೆಯ ಬಿಎಸ್‍ಎನ್‍ಎಲ್ ಕಚೇರಿಯಿಂದ ಮಾರುಕಟ್ಟೆವರೆಗೆ ಪಟ್ಟಣದ ಎರಡು ಕಡೆಗಳಲ್ಲಿಯೂ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಾಹನ ಮಾಲಿಕರು ಮತ್ತು ಚಾಲಕರು ಸಹಕರಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವದು ಎಂದು ನಾಪೆÇೀಕ್ಲು ಪೆÇಲೀಸ್ ಠಾಣಾ ಪ್ರಕಟಣೆ ತಿಳಿಸಿದೆ.