ಶನಿವಾರಸಂತೆ, ಸೆ. 5: ಜಿಲ್ಲೆಯ ಗಡಿಭಾಗಕ್ಕೆ ಹೊಂದಿರುವ ಶನಿವಾರಸಂತೆಯಿಂದ 15 ಕಿ.ಮೀ. ಇರುವ ಚಿಕ್ಕಕುಂದೂರು ಗ್ರಾಮದ ಬಸ್ ನಿಲ್ದಾಣದಲ್ಲಿ ವೃದ್ಧೆಯೋರ್ವರು ಸುಮಾರು 6 ತಿಂಗಳಿನಿಂದ ವಾಸವಾಗಿದ್ದರು. ಅಜ್ಜಿ ಬಸ್ ನಿಲ್ದಾಣದಲ್ಲಿ ಮಳೆ, ಗಾಳಿ ಅನ್ನದೆ ಮಲುಗುತ್ತಿದ್ದರು. ಇವರಿಗೆ ಚಿಕ್ಕಕುಂದೂರು ಗ್ರಾಮಸ್ಥರು ಊಟ ಕೊಡುತ್ತಿದ್ದರು. ಈ ಅಜ್ಜಿಯನ್ನು ನೋಡಿದ ಕರವೇ ಶನಿವಾರಸಂತೆ ಹೋಬಳಿ ಘಟಕದ ಉಪಾಧ್ಯಕ್ಷ ರಾಕೇಶ್ ಅವರು ಕರವೇ ತಂಡಕ್ಕೆ ತಿಳಿಸಿದ ಮೇರೆಗೆ ಕರವೇ ತಂಡ ಚಿಕ್ಕಕುಂದೂರು ಗ್ರಾಮಕೆ ಭೇಟಿ ನೀಡಿ ಅಜ್ಜಿಯನ್ನು ಮಾತನಾಡಿಸಿದಾಗ ಕನ್ನಡ ಸರಿಯಾಗಿ ಬರುವದಿಲ್ಲ.

ಅದಾಜು 70 ವರ್ಷ ಆಗಿರುತ್ತದೆ. ಈ ಅಜ್ಜಿಯನ್ನು ಅನಾಥಾಶ್ರಮ ಸೇರಿಸಲು ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಾಸ್ಸಿಸ್ ಡಿಸೋಜ ಅವರು ಮಡಿಕೇರಿ ಶಕ್ತಿ ಅನಾಥಾಶ್ರಮಕ್ಕೆ ಫೋನ್ ಮಾಡಿ ವಿಷಯ ತಿಳಿಸಿದಾಗ ಆಶ್ರಮದವರು ಅವರನ್ನು ಕರೆದುಕೊಂಡು ಬನ್ನಿ ಅಂತ ಹೇಳಿದ್ದಾರೆ. ಕರವೇ ಕಾರ್ಯಕರ್ತರು ಅಜ್ಜಿಗೆ ಸ್ನಾನ ಮಾಡಿಸಿ, ಕರವೇ ತಂಡದಿಂದ ಹೊಸ ಬಟ್ಟೆ ಕೊಡಿಸಿದರು.

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ತಂಡ ಈ ಅಜ್ಜಿಯನ್ನು ಮಡಿಕೇರಿ ಅನಾಥಾಶ್ರಮಕ್ಕೆ ಖುದ್ದಾಗಿ ಕರೆದುಕೊಂಡು ಹೋಗಿ ಸೇರಿಸಿದರು. ಈ ತರಹದವರು ಯಾವದೇ ಬಸ್ ನಿಲ್ದಾಣದಲ್ಲಿ ವಯಸ್ಸಾದವರು ಇದ್ದರೆ ಕರವೇ ತಂಡಕ್ಕೆ ತಿಳಿಸಿದರೆ ನಾವು ಅವರನ್ನು ಅನಾಥಾಶ್ರಮ ಸೇರಿಸುತ್ತೇವೆ ಎಂದು ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಾಸ್ಸಿಸ್ ಡಿಸೋಜ ತಿಳಿಸಿದ್ದಾರೆ. ಮಾಹಿತಿ ನೀಡಲು ಈ ಮೊಬೈಲ್ ಸಂಖ್ಯೆಯನ್ನು 9449255831 ಸಂಪರ್ಕಿಸಬಹುದು.

ಶನಿವಾರಸಂತೆ ಕರವೇ ಉಪಾಧ್ಯಕ್ಷ ರಾಕೇಶ್, ರಾಮನಹಳ್ಳಿ ರಶೀತ್, ಚಿಕ್ಕಕುಂದೂರು ಅಶ್ವತ್ಥ ಮತ್ತು ಗ್ರಾಮಸ್ಥರು ಇದ್ದರು.