ಕೂಡಿಗೆ, ಸೆ. 5: ಕೂಡಿಗೆ ನಿವಾಸಿ ಇಂದಂಡ ನಂಜಪ್ಪ (58) ಅವರು ಕಳೆದ 20 ದಿನಗಳಿಂದ ಕಾಣೆಯಾಗಿದ್ದರು. ಇಂದಂಡ ನಂಜಪ್ಪ ಅವರು ಕಾಣೆಯಾಗಿರುವದಾಗಿ ಅವರ ಕುಟುಂಬದವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ತುಂಬಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಮೃತದೇಹವೊಂದು ತೇಲಿ ಬಂದು ಕೂಡಿಗೆಯ ಕೇಂದ್ರೀಯ ನೀರು ತಪಾಸಣಾ ಕೇಂದ್ರದ ಸಮೀಪದಲ್ಲಿ ಗಿಡಗಂಟಿಗಳಲ್ಲಿ ಸಿಕ್ಕಿಕೊಂಡಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಮೃತದೇಹವನ್ನು ಹೊರತೆಗೆದು ಪರೀಕ್ಷಿಸಿದಾಗ ಕಳೇಬರಹವು ಕೂಡಿಗೆ ನಿವಾಸಿ ಇಂದಂಡ ನಂಜಪ್ಪ ಎಂದು ಗುರುತಿಸಲಾಯಿತು.

ನಂತರ ಕಳೇಬರಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.