ಮಡಿಕೇರಿ, ಸೆ. 1: ಪ್ರವಾಹ ಉಂಟಾದ ಸಂದರ್ಭ ಕಚೇರಿಗೆ ನೀರು ನುಗ್ಗಿ ಲ್ಯಾಪ್‍ಟಾಪ್ ಹಾನಿಗೀಡಾಗಿರುವ ವೀರಾಜಪೇಟೆಯ ಪತ್ರಕರ್ತೆ ರಜಿತಾ ಕಾರ್ಯಪ್ಪ ಅವರಿಗೆ ಗೋಣಿಕೊಪ್ಪ ಪತ್ರಕರ್ತ ಸ್ನೇಹಿತರು ಸೇರಿ ಲ್ಯಾಪ್‍ಟಾಪ್ ನೀಡಿದ್ದಾರೆ. ರೇಖಾ ಗಣೇಶ್, ಎಚ್.ಕೆ. ಜಗದೀಶ್, ಸಣ್ಣುವಂಡ ಕಿಶೋರ್ ನಾಚಪ್ಪ, ಕುಪ್ಪಂಡ ದತ್ತಾತ್ರಿ, ಮಂಡೇಡ ಅಶೋಕ, ಚಿಮ್ಮಣಮಾಡ ದರ್ಶನ್, ವಿ.ವಿ. ಅರುಣ್ ಕುಮಾರ್ ಸೇರಿ ಲ್ಯಾಪ್‍ಟಾಪ್ ಖರೀದಿಸಿ ರಜಿತಾರಿಗೆ ನೀಡಿದರು. ಲ್ಯಾಪ್‍ಟಾಪ್ ವಿತರಣೆ ವೇಳೆ ಆರ್ಥಿಕ ನೆರವು ನೀಡಿದವರೊಂದಿಗೆ ಪತ್ರಕರ್ತರಾದ ಕೆರೆ ಮಂಜು, ಡಿ.ಪಿ. ರಾಜೇಶ್, ಕಿಶೋರ್ ಕುಮಾರ್ ಶೆಟ್ಟಿ, ರವಿಕುಮಾರ್ ಇದ್ದರು.