ವೀರಾಜಪೇಟೆ, ಸೆ. 3: ದೇವಣಗೇರಿ ಪ್ರಾಥಮಿಕ ಕೃಷಿ ಸಹಕಾರ ಸಂಘ 2018-19 ನೇ ಸಾಲಿಗೆ 22 ಲಕ್ಷದ 8 ಸಾವಿರದ 700 ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮೂಕೊಂಡ ಪಿ.ಶಶಿ ಸುಬ್ರಮಣಿ ಹೇಳಿದರು.
ವೀರಾಜಪೇಟೆ ಸಮೀಪದ ದೇವಣಗೇರಿ ಸಹಕಾರ ಸಂಘದ 40ನೇ ವಾರ್ಷಿಕ ಮಹಾಸಭೆ ಹಾಗೂ ಹೆಚ್ಚು ಭತ್ತ ಬೆಳೆದ ಕೃಷಿಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಸಭೆಯನ್ನುದ್ದೇಶಿಸಿ ಸಂಘದ ಸದಸ್ಯರಿಗೆ ಶೇ 15ರಷ್ಟು ಡಿವಿಡೆಂಟ್ ಹಾಗೂ ರೂ. 7 ಕೋಟಿ 40 ಸಾವಿರಕ್ಕೂ ಹೆಚ್ಚು ಸಾಲ ನೀಡಲಾಗಿದೆ. ಕೃಷಿಕರು ಸಂಘದ ಸದಸ್ಯರುಗಳು ಬೇರೆ ಕಡೆಯಿಂದ ಗೊಬ್ಬರ ಖರೀದಿ ಯನ್ನು ಬಿಟ್ಟು ನಮ್ಮಲ್ಲಿಯೇ ಗೊಬ್ಬರ ಖರೀದಿ ಮಾಡಿದರೆ ಸಂಘಕ್ಕೆ ಇನ್ನು ಹೆಚ್ಚಿನ ಲಾಭ ಬರುವಂತಾಗುತ್ತದೆ ಎಂದರು.
ಈ ಬಾರಿ ಹೆಚ್ಚು ಭತ್ತದ ಬೆಳೆ ಪಡೆದ ಕೃಷಿಕರಾದ ಮುಕ್ಕಾಟಿರ ಸುನಿಲ್ ನಾಣಯ್ಯ, ಕೊಳುವಂಡ ಕಾರ್ಯಪ್ಪ, ಬಿಲ್ಲವರ ಕೆ.ರಮೇಶ್ ಇವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಅವರುಗಳು ಮಾತನಾಡಿ, ಪ್ರತಿ ವರ್ಷ ಗದ್ದೆಯನ್ನು ನಾಟಿಮಾಡಿ ಉತ್ತಮ ಬೆಳೆ ತೆಗೆಯುವದರೊಂದಿಗೆ ಸಾಕಷ್ಟು ಭತ್ತವನ್ನು ಮನೆಗೆ ಬಳಸಿಕೊಂಡು ಉಳಿದ ಭತ್ತವನ್ನು ಮಾರಾಟಗೊಳಿಸ ಬಹುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆಡಿಸಿಸಿ ಬ್ಯಾಂಕ್‍ನ ಮೇಲ್ವಿಚಾರಕ ಶಂಕರ್ ಕೃಷಿಕರನ್ನುದ್ದೇಶಿಸಿ ಮಾತನಾಡಿದರು. ಎಸ್.ಎಸ್. ಎಲ್. ಸಿ. ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಸಂಘದಿಂದ ನೀಡಿದ ಪ್ರೋತ್ಸಾಹ ಧನವನ್ನು ತಾ. ಪಂ. ಸದಸೆÀ್ಯ ಸೀತಮ್ಮ ವಿತರಿಸಿದರು. ಮಳೆಯಿಂದ ಮನೆ ಹಾನಿಯಾದ 8 ಮಂದಿಗೆ ಸಂಘದ ಅಧ್ಯಕ್ಷ ಶಶಿ ಸುಬ್ರಮಣಿ ಸಹಾಯಧನ ಚೆಕ್ ವಿತರಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮುಂಡಚಾಡಿರ ನಂದನಾಚಪ್ಪ, ನಿರ್ದೇಶಕರುಗಳಾದ ಚಪ್ಪಂಡ ಬಿ.ಉತ್ತಯ್ಯ, ಮೂಕೊಂಡ ಪಿ.ಉಮೇಶ, ಮಂಡೇಪಂಡ ಎಂ.ಪಾರ್ವತಿ, ಅಲ್ಲಪಂಡ ಎಂ.ತಾರ, ಹೆಚ್.ಎ.ಭೀಮ, ಚಾರಿಮಂಡ ಬಿ.ಪೂಣಚ್ಚ, ವಿ.ಎಲ್.ಸುರೇಶ್, ಪಿ.ಎಂ.ರಫೀದ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಉದಯ, ಲೆಕ್ಕಿಗರಾದ ಪಿ.ಟಿ.ನೀಲಮ್ಮ, ಹಂಗಾಮಿ ಗುಮಾಸ್ತ ಪಿ.ಎಂ.ಹರಿ ಪ್ರಸಾದ್ ಮೊದಲಾದ ವರು ಉಪಸ್ಥಿತರಿದ್ದರು.