ವೀರಾಜಪೇಟೆ, ಸೆ. 3: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ತಿತಿಮತಿ ವಲಯದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ವಿವಿಧ ಜಾತಿಯ ಕಾಡು ಮರಗಳ 3,000 ಬೀಜದುಂಡೆಗಳನ್ನು ಬಿತ್ತನೆ ಮಾಡಲಾಯಿತು.

ಹಲಸು, ಬಿದಿರು, ಹಾಲೇಹಣ್ಣು, ಹೊಂಗೆ, ಕಾಡುಬೇವು ಮುಂತಾದ ಕಾಡುಮರಗಳ ಬೀಜವನ್ನು ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನ ಸಾವಯುವ ಕೃಷಿ ಸಹಕಾರಿ ನಿಯಮಿತ, ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲÀಸ್ಟರ್ ಹಾಗೂ ಬೆಂಗಳೂರಿನ ಸಮರ್ಥ ಭಾರತ ಸಂಸ್ಥೆಯು ಪ್ರಾಯೋಜಿಸಿತ್ತು.

ಬೀಜದುಂಡೆಗಳನ್ನು ಸಿದ್ಧಪಡಿಸಲು ಬಳಟ್ಟಿಕಾಳಂಡ ಪಿ. ಮುದ್ದಯ್ಯ ಮಾರ್ಗದರ್ಶನ ಮಾಡಿದರು. ತಿತಿಮತಿ ವಲಯ ಅಧಿಕಾರಿ ಶಿವಾನಂದ್, ದುರ್ಗೇಶ್, ವಿಶ್ವಾನಂದ್ ಹಾಗೂ ಶಿರಾಜ್ ವಿದ್ಯಾರ್ಥಿಗಳಿಗೆ ಬೀಜದುಂಡೆಗಳನ್ನು ಬಿತ್ತರಿಸಲು ಮಾರ್ಗದರ್ಶನ ನೀಡಿದರು.

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ಹೆಚ್.ವಿ. ನಾಗರಾಜು ಹಾಗೂ ನಿರ್ಮಿತಾ ಮಂದಣ್ಣ ಉಪಸ್ಥಿತರಿದ್ದರು.