ಕೂಡಿಗೆ, ಸೆ. 3: ಕೂಡು ಮಂಗಳೂರು ಗ್ರಾ.ಪಂ. ವತಿಯಿಂದ ಕೂಡಿಗೆ ಸೇತುವೆ ಬಳಿಯಿಂದ ಕೂಡ್ಲೂರು ವೀರಭೂಮಿ ಸರ್ಕಲ್‍ವರೆಗೆ ಹಾಗೂ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿ 3 ಸಾವಿರ ಗಿಡ ನೆಡುವ ಆಭಿಯಾನ ಮತ್ತು ಜಾಗೃತಿ ಜಾಥಾ ಕಾರ್ಯ ಕ್ರಮವು ತಾ. 3 ರಂದು ನಡೆಯಲ್ಲಿದೆ. ವಿಶ್ವ ಪರಿಸರ ದಿನದ ಆಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಅಯಿಷಾ ತಿಳಿಸಿದರು. ಕಾರ್ಯಕ್ರಮ ದಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಸಮಾಜ ಸೇವಕರು, ಕೂಡ್ಲೂರು ಕೈಗಾರಿಕಾ ಪ್ರದೇಶದ ಉದ್ದಿಮೆದಾರರು, ಮಹಿಳಾ ಸಂಘದ ಸದಸ್ಯರು, ಸ್ವಸಹಾಯ ಸಂಘದ ಪ್ರತಿನಿಧಿಗಳು, ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.