ವೀರಾಜಪೇಟೆ, ಸೆ. 3 : ಸ. ಪ್ರ. ದರ್ಜೆ ಕಾಲೇಜು, ರೋವರ್ಸ್ ಮತ್ತು ರೇಂಜರ್ಸ್ ಘಟಕವು ರೋವರ್ ಲೀಡರ್ ವನಿತ್ ಕುಮಾರ್ ಮಾರ್ಗದರ್ಶನದಲ್ಲಿ, ರೋವರ್ ಮೆಟ್ ತಮ್ಮಯ್ಯ ನೇತೃತ್ವದಲ್ಲಿ ಗೋಣಿಕೊಪ್ಪ ಕೊಡಗು ಕಿತ್ತಳೆ ಬೆಳೆಗಾರರ ಸಂಘದ ಜ್ಯೂಸ್ ಕಾರ್ಖಾನೆಗೆ ಭೇಟಿ ನೀಡಿದರು. ಕಿತ್ತಳೆ, ದ್ರಾಕ್ಷೆ, ಅನಾನಾಸು, ಮೊದಲಾದ ಹಣ್ಣುಗಳ ಸಂಸ್ಕರಣೆ, ಹಣ್ಣಿನ ರಸ ಉತ್ಪಾದನೆ ಚಟುವಟಿಕೆಗಳ ಮಾಹಿತಿಯನ್ನು ತಿಳಿದುಕೊಂಡರು. ವೀರಾಜಪೇಟೆ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಿರಣ್ ಬೆಂಕಿ ನಂದಿಸಲು ಬಳಸುವ ವಸ್ತುಗಳ ಬಗ್ಗೆ ಸವಿವರವಾಗಿ ತಿಳಿಸಿದರು.