ಸೋಮವಾರಪೇಟೆ ಸೆ. 3 : ಓಎಲ್‍ವಿ ಶಾಲಾ ಮೈದಾನದಲ್ಲಿ ನಡೆದ ವಲಯ ಮಟ್ಟದ ಅಂತರ್ ಶಾಲಾ ವಿದ್ಯಾರ್ಥಿಗಳ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಜ್ಞಾನವಿಕಾಸ ಶಾಲೆಯ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ಖೋ-ಖೋ, ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ, ಬಾಲಕಿಯರ ವಿಭಾಗದ ವಾಲಿಬಾಲ್‍ನಲ್ಲಿ ಪ್ರಥಮ, ಕಬಡ್ಡಿಯಲ್ಲಿ ದ್ವಿತೀಯ, ಖೋ-ಖೋ ಸ್ಪರ್ಧೆಯಲ್ಲಿ ದ್ವಿತೀಯ, ವಿದ್ಯಾರ್ಥಿನಿಯರ ವಿಭಾಗದ ಚೆಸ್ ಪಂದ್ಯಾಟ ದಲ್ಲಿ ಪ್ರಥಮ, ಬಾಲಕರ ವಿಭಾಗದ ಚೆಸ್‍ನಲ್ಲಿ ಪ್ರಥಮ, ಶಟಲ್ ಬ್ಯಾಡ್ಮಿಂಟನ್‍ನಲ್ಲಿ ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸ ಲಾಯಿತು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಕವಿತ ಸೇರಿದಂತೆ ಶಿಕ್ಷಕರು, ಶಾಲಾ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.