ಮಡಿಕೇರಿ, ಸೆ. 3: ಕೊಡಗು ಪೊಲೀಸ್ ಶಸಸ್ತ್ರದಳದ ಸಹಾಯಕ ಠಾಣಾಧಿಕಾರಿ ಚೆನ್ನಕೇಶವ ಎಂಬವರು ಮೊನ್ನೆ ರಾತ್ರಿ ಕಡಗದಾಳುವಿನಲ್ಲಿ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದಾರೆ. ರಾತ್ರಿ ಕಡಗದಾಳುವಿನ ಪೊಲೀಸ್ ಉಪ ಕೇಂದ್ರದಲ್ಲಿ ತಂಗಿದ್ದ ಅವರು ಮೂತ್ರ ವಿಸರ್ಜಿಸಲು ಹೊರಗೆ ಬಂದಿದ್ದಾಗ ಹಠಾತ್ ಕಾಡಾನೆ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ. ಇದೇ ವೇಳೆ ಕಾರೊಂದರ ಮೇಲೆ ದಾಳಿ ನಡೆಸಿರುವ ಆನೆ ಜಖಂಗೊಳಿಸಿ ತೆರಳಿದೆ.

ಈ ವೇಳೆ ಅವರ ಎಡತೊಡೆ ಹಾಗೂ ಬಲಗಾಲಿಗೆ ಪೆಟ್ಟಾಗಿದ್ದು, ಪ್ರಸಕ್ತ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.