ಶ್ರೀಮಂಗಲ, ಸೆ. 3 : ಕೊಡಗಿನ ಕೃಷಿ ಸಂಸ್ಕøತಿಯ ಕೈಲ್ ಪೋಳ್ದ್ ಹಬ್ಬವನ್ನು ಪೊನ್ನಂಪೇಟೆ ಕೊಡವ ಸಮಾಜ ಮತ್ತು ಕ್ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಾರ್ವತ್ರಿಕವಾಗಿ ಆಚರಣೆ ಮಾಡಲಾಯಿತು.
ಕೃಷಿಗೆ ಬಳಸುವ ಕೃಷಿ ಪರಿಕರಗಳಾದ ನೇಗಿಲು ಮತ್ತು ನೊಗಗಳಿಗೆ ಪೂಜೆ ಸಲ್ಲಿಸಿ ನಂತರ ಕೋವಿ, ಕತ್ತಿ ಮತ್ತು ವಾಹನಗಳಿಗೆ ಆಯುಧ ಪೂಜೆ ಮಾಡಲಾಯಿತು. ನೂರಕ್ಕು ಅಧಿಕ ವಾಹನಗಳಿಗೆ ಸಾಮೂಹಿಕವಾಗಿ ಪೂಜೆ ಮಾಡಿ ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಕೋವಿಗಳಿಗೂ ಸಾಮೂಹಿಕವಾಗಿ ಪೂಜೆ ಸಲ್ಲಿಸಿದ ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಸಾಂಪ್ರದಾಯಿಕ ಹಬ್ಬದ ಖಾದ್ಯದೊಂದಿಗೆ ಗುರುಹಿರಿಯರಿಗೆ ನೈವೇಧ್ಯವಿಟ್ಟು ಪೂಜೆ ಸಲ್ಲಿಸಲಾಯಿತು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿದ ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ ಕೊಡವರ ಹಬ್ಬಗಳು ಕೃಷಿ ಪ್ರಧಾನವಾಗಿದೆ. ಕೊಡವರು ಕೃಷಿಯನ್ನು ಉಳಿಸಿಕೊಳ್ಳುವ ಮೂಲಕ ಸಂಸ್ಕøತಿಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಸ್ಪರ್ಧೆಯ ವಿಜೇತರು: ಆಪಟ್ಟೀರ ಪ್ರದೀಪ್ ಹಾಗೂ ಆಪಟ್ಟೀರ ಬೋಪಣ್ಣ ಪ್ರಥಮ ಬಹುಮಾನವನ್ನು ಜಂಟಿಯಾಗಿ ಹಂಚಿಕೊಂಡರು. ದ್ವ್ವಿತೀಯ ಬಹುಮಾನವನ್ನು ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ ಪಡೆದರು. ಕಾರ್ಯಕ್ರಮ ದಲ್ಲಿ ಕೈಲ್ ಪೋಳ್ದ್ ºಬ್ಬದ ಸಾಂಪ್ರದಾಯಿಕ ಊಟೋಪಚಾರವನ್ನು ಸಾರ್ವತ್ರಿಕವಾಗಿ ಮಾಡಿ ಸಂತಸಗೊಂಡರು. ಕ್ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚೆರಿಯಪಂಡ ರಾಜ ನಂಜಪ್ಪ, ಉಪಾಧ್ಯಕ್ಷ ಚಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್ ದೇವಯ್ಯ, ಖಜಾಂಜಿ ಕೋಟೇರ ಕಿಶನ್ ಉತ್ತಪ್ಪ, ನಿರ್ದೇಶಕರುಗಳಾದ ಆಲೇಮಾಡ ಸಧಿ, ಅಪ್ಪೆಂಗಡ ರನ್ನು, ಕಳ್ಳಚಂಡ ಚಿಪ್ಪ ದೇವಯ್ಯ, ಮತ್ರಂಡ ಕಬೀರ್ ಬಳಗದ ಮಾಜಿ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ, ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಗೌರವ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಖಜಾಂಜಿ ಮೂಕಳೇರ ಲಕ್ಷ್ಮಣ, ನಿರ್ದೇಶಕರು ಗಳಾದ ಮಲ್ಲಮಾಡ ಪ್ರಭು ಪೂಣಚ್ಚ್, ಅಡ್ಡಂಡ ಸುನೀಲ್, ಚೆಪ್ಪುಡಿರ ರಾಕೇಶ್ ದೇವಯ್ಯ, ಮೂಕಳೇರ ಅರಸು ನಂಜಪ್ಪ, ಮಂಡಚಂಡ ದಿನೇಶ್ ಚಿಟ್ಟಿಯಪ್ಪ ಹಾಗೂ ಇತರರು ಹಾಜರಿದ್ದರು.
ಮುಗುಟಗೇರಿ
ಪೊನ್ನಂಪೇಟೆ: ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಕೈಲ್ ಮುಹೂರ್ತ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಗ್ರಾಮದ ಭಗವತಿ ದೇವಸ್ಥಾನ ಹಾಗೂ ಕುಟ್ಟಿಚಾತ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ನಂತರ ತೊಣಕೇರಿ ಭಗವತಿಯ ಉಪದೇವತೆ ಭದ್ರಕಾಳಿ ಅಂಬಲದಲ್ಲಿ ಗ್ರಾಮಸ್ಥರೆಲ್ಲ ಸೇರಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಸ್ಪರ್ಧೆಗೂ ಮೊದಲು ಗ್ರಾಮಸ್ಥರು ತಮ್ಮ ಕೋವಿಯನ್ನು ಹಿಡಿದುಕೊಂಡು ಅರಳಿಕಟ್ಟೆಯ ಸುತ್ತಾ ದೇವರನ್ನು ಸ್ತುತಿಸುತ್ತಾ ಪ್ರಾರ್ಥನೆ ಸಲ್ಲಿಸಿದರು. ನಂತರ ಗ್ರಾಮದ ಹಿರಿಯ ಮಲ್ಚೀರ ಜೆ. ಕುಶಾಲಪ್ಪ ಗುಂಡು ಹಾರಿಸುವ ಮೂಲಕ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆಗೆ ಚಾಲನೆ ನೀಡಿದರು.
50 ಕ್ಕಿಂತಲೂ ಹೆಚ್ಚು ಗ್ರಾಮಸ್ಥರು ತೆಂಗಿನ ಕಾಯಿಗೆ ಗುರಿ ಇಟ್ಟು ಕೇಕೆ ಹಾಕಿದರು. ಅಂತಿಮವಾಗಿ ಮುದ್ದಿಯಡ ನಿತಿನ್ ಗೆದ್ದು ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥ ಕಂದಾ ಸುಬ್ಬಯ್ಯ ಮಳೆಗಾಲದ ಸಂದರ್ಭದಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಗದ್ದೆನಾಟಿ ಕೆಲಸವೆಲ್ಲ ಮುಗಿದ ನಂತರ ಬರುವ ಕೈಲ್ ಮುಹೂರ್ತ ಹಬ್ಬ ಕೃಷಿಕರಿಗೆ ಸಂಭ್ರಮದ ಹಬ್ಬವಾಗಿದ್ದು, ಗ್ರಾಮದವರೆಲ್ಲಾ ಇಂದು ಒಂದೇ ಕಡೆ ಸೇರಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇವೆ. ಕಳೆದೆರಡು ವರ್ಷಗಳಿಂದ ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕಾರಣ ಸಾಕಷ್ಟು ಜನ ತೊಂದರೆಗೊಳ ಗಾಗಿದ್ದಾರೆ. ಇವರೆಲ್ಲರಿಗೂ ತಾಯಿ ಕಾವೇರಿ ಹಾಗೂ ಇಗ್ಗುತ್ತಪ್ಪ ದೇವರು ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಕೊಡಲಿ ಎಂದರು. ದೇವಸ್ಥಾನದ ಅಧ್ಯಕ್ಷ ಕಳ್ಳಿಚಂಡ ಶಂಭು ದೇವಯ್ಯ, ಊರಿನ ಮುಖ್ಯಸ್ಥರಾದ ಮಲ್ಚೀರ ಉತ್ತಯ್ಯ, ಗ್ರಾಮದ ಮರಣ ನಿಧಿಯ ಅಧ್ಯಕ್ಷ ಚೀರಂಡ ಗಣಪತಿ ಹಾಗೂ ನೂರಾರು ಗ್ರಾಮಸ್ಥರು ಇದ್ದರು.
ಸಿಎನ್ಸಿ ಪುಷ್ಪಾಂಜಲಿ
ನಾಪೆÇೀಕ್ಲು: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ದೇವಾಟ್ ಪರಂಬುವಿನ ನರಮೇಧ ದುರಂತ ಸಮಾಧಿ ಸ್ಥಳದಲ್ಲಿ ಕೈಲ್ ಪೆÇೀಳ್ದ್ ಪ್ರಯುಕ್ತ ಪುಷ್ಪಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕಲಿಯಂಡ ಪ್ರಕಾಶ್, ಅಲಮಂಡ ಜೈ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ ಇದ್ದರು.
ಮಳೆ ಅಡ್ಡಿ
ಗೋಣಿಕೊಪ್ಪ ವರದಿ: ಕೈಲ್ಪೊಳ್ದ್ ನಮ್ಮೆಯನ್ನು ಮನೆ, ಮನೆಗಳಲ್ಲಿ ಆಚರಿಸುವ ಮೂಲಕ ಕೊಡಗಿನ ಕೃಷಿ ಸಂಸ್ಕøತಿಯನ್ನು ಬಿಂಬಿಸಲಾಯಿತು. ತೋಕ್ ಪೂ ಮೂಲಕ ಪೂಜಿಸಲಾಯಿತು. ಮನೆಗಳಲ್ಲಿ ಕೃಷಿಗೆ ಬಳಸುವ ನೇಗಿಲು, ನೊಗ ಸೇರಿದಂತೆ ಕೋವಿ, ಒಡಿಕತ್ತಿ, ಪೀಚೆಕತ್ತಿಯನ್ನು ದೇವರ ಮುಂದಿಟ್ಟು ಪೂಜಿಸಲಾಯಿತು. ಕೃಷಿಗೆ ರೈತನ ಜತೆಯಲ್ಲಿಯೇ ಇರುವ ಕೃಷಿ ಪರಿಕರಗಳನ್ನು ವಿಶೇಷವಾಗಿ ಪೂಜಿಸಿ ಗೌರವ ನೀಡಲಾಯಿತು.
ಪ್ರವಾಹದ ನಡುವೆಯೂ ಹಬ್ಬದ ಆಚರಣೆ ನಡೆಯಿತು. ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಮಕ್ಕಳು ಕೂಡ ಆಚರಣೆಯಲ್ಲಿ ತೊಡಗಿಸಿಕೊಂಡರು.
ಮಳೆಯ ಕಾರಣ ಕೊಟ್ಟಗೇರಿ ಗ್ರಾಮದ ಮಂದ್ನಲ್ಲಿ ನಡೆಯಬೇಕಿದ್ದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮವನ್ನು ರದ್ದು ಪಡಿಸಲಾಯಿತು.