ನಾಪೆÇೀಕ್ಲು, ಸೆ. 1: ಉಮಾಮಹೇಶ್ವರಿ ಯುವ ಸಂಘದ ವತಿಯಿಂದ ಬರುವ ಅಕ್ಟೋಬರ್ ತಿಂಗಳ 4,5,6 ರಂದು ಜಿಲ್ಲಾ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯನ್ನು ದಿ. ಬಿ.ಟಿ. ಪ್ರದೀಪ್ ಸ್ಮರಣಾರ್ಥ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕಾಟುಮಣಿಯಂಡ ಉಮೇಶ್ ಹೇಳಿದರು. ಅವರು ಮೂಟೇರಿ ಉಮಾಮಹೇಶ್ವರಿ ದೇವಾಲಯದ ಸಮೀಪದ ನೂತನ ಸಮುದಾಯ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಪಂದ್ಯಾವಳಿಯ ಸಂದರ್ಭ ಇಲ್ಲಿ ನಿರ್ಮಿಸಲಾದ ಸಮುದಾಯ ಭವನದ ಉದ್ಘಾಟನೆಯನ್ನು ಅಕ್ಟೋಬರ್ 4 ರಂದು ನಡೆಸಲಾಗು ವದು ಎಂದು ತಿಳಿಸಿದ ಅವರು; ಪಂದ್ಯಾವಳಿಯನ್ನು ದಿವಂಗತ ಬಿದ್ದಾಟಂಡ ಟಿ. ಪ್ರದೀಪ್ ಅವರ ಸ್ಮರಣೆಯಲ್ಲಿ ನಡೆಸಲಾಗುವದು. ಇಂದು ಅವರಿಲ್ಲ ಆದರೆ ಅವರ ಹೆಸರಿನಲ್ಲಿ ನಮ್ಮ ಸಂಘವು ಪಂದ್ಯಾಟವನ್ನು ನಡೆಸಲು ತೀರ್ಮಾನಿಸಿದೆ ಎಂದು ತಿಳಿಸಿದÀರು. ಇದೇ ಪ್ರಥಮ ಬಾರಿಗೆ ಸಿಂಥೆಟಿಕ್ ಕೋರ್ಟ್‍ನಲ್ಲಿ ಪಂದ್ಯಾಟವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದ ಅವರು, ಮುಕ್ತ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾಟದೊಂದಿಗೆ 50 ಪ್ಲಸ್ ಪಂದ್ಯಾಟ ನಡೆಸಲು ಕ್ರಮ ಕೈಗೊಂಡಿರುವದಾಗಿ ತಿಳಿಸಿದರು.

ಪಂದ್ಯಾಟದಲ್ಲಿ ಮೊದಲ ಸ್ಥಾನಗಳಿಸಿದ ಆಟಗಾರನಿಗೆ 10 ಸಾವಿರ ನಗದು ಮತ್ತು ಪಾರಿತೋಷಕ ದ್ವಿತೀಯ ಸ್ಥಾನ ಪಡೆದ ಆಟಗಾರನಿಗೆ 5 ಸಾವಿರ ನಗದು ಮತ್ತು ಪಾರಿತೋಷಕ ಮತ್ತು 50 ಪ್ಲಸ್‍ನಲ್ಲಿ ಗೆದ್ದವರಿಗೆ 5 ಸಾವಿರ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಎರಡೂವರೆ ಸಾವಿರ ಬಹುಮಾನವನ್ನು ನೀಡಲಾಗುವದು ಎಂದರು. ಪಂದ್ಯಾಟವು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದ್ದು ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಪ್ರತಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಬಿದ್ದಾಟಂಡ ಸಂಪತ್, ಕಾರ್ಯದರ್ಶಿ ಅಚ್ಚಾಂಡಿರ ನಾಣಯ್ಯ, ಖಜಾಂಚಿ ಪುಲ್ಲೇರ ಸೋಮಯ್ಯ, ಜಂಟಿ ಕಾರ್ಯದರ್ಶಿ ಪಟ್ರಪಂಡ ಕಾರ್ಯಪ್ಪ, ಅಪ್ಪಚ್ಚೀರ ಬೋಪಣ್ಣ, ಅಚ್ಚಾಂಡಿರ ಮಂದಣ್ಣ, ಇದ್ದರು.