ಮಡಿಕೇರಿ, ಸೆ. 1: ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಸಮಾಜ ಕಲ್ಯಾಣ ಖಾತೆ ಹೊಂದಿರುವ ಗೋವಿಂದ ಎಂ. ಕಾರಜೋಳ ಅವರು ತಾ. 3 ರಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ತಾ. 3 ರಂದು ಸಂಜೆ ಮೈಸೂರಿನಿಂದ ಆಗಮಿಸಿ, ಕುಶಾಲನಗರ, ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಅತಿವೃಷ್ಟಿ ಪ್ರದೇಶಗಳ ವೀಕ್ಷಣೆ ಕೈಗೊಳ್ಳ ಲಿದ್ದಾರೆ.(ಮೊದಲ ಪುಟದಿಂದ) ರಾತ್ರಿ ಮಡಿಕೇರಿಯಲ್ಲಿ ತಂಗಲಿರುವ ಸಚಿವರು, ತಾ. 4 ರಂದು ಸಂಪಾಜೆ, ಭಾಗಮಂಡಲ ಮುಂತಾದೆಡೆಗಳಲ್ಲಿ ಪ್ರಾಕೃತಿಕ ಹಾನಿಯ ಪರಿಶೀಲನೆ ಬಳಿಕ, ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಂಪೂರ್ಣ ಮಾಹಿತಿ ಪಡೆಯುವ ದಿಸೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಅಪರಾಹ್ನ ಮಡಿಕೇರಿ-ಕೊಣನೂರು, ಮಾಕುಟ್ಟ ಹೆದ್ದಾರಿಯ ಪರಿವೀಕ್ಷಣೆ ನಡೆಸಲಿರುವ ಉಪಮುಖ್ಯಮಂತ್ರಿಗಳು, ಕಣ್ಣೂರು ಮುಖಾಂತರ ಹುಬ್ಬಳ್ಳಿಗೆ ಹಿಂತಿರುಗಲಿದ್ದಾರೆ ಎಂದು ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ್ ತಿಳಿಸಿದ್ದಾರೆ.