ವೀರಾಜಪೇಟೆ, ತಾ. 1: ಚೆಂಬೆಬೆಳ್ಳೂರು ಕೊಡವ ಅಸೋಸಿಯೇಶನ್ ವತಿಯಿಂದ ವರ್ಷಂಪ್ರತಿಯಂತೆ ತಾ. 3 ರಂದು ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುವದು ಎಂದು ಕಾರ್ಯದರ್ಶಿ ಮಂಡೇಪಂಡ ಮುತ್ತಪ್ಪ ತಿಳಿಸಿದ್ದಾರೆ.

ಕೈಲ್ ಮುಹೂರ್ತ ಪ್ರಯುಕ್ತ ಅಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಆಟೋಟ ಏರ್ಪಡಿಸಲಾಗಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಚೆಂಬೆಬೆಳ್ಳೂರಿನ ನಿವೃತ್ತ ಸುಬೇದಾರ್ ಚಂಬಾಂಡ ಮುದ್ದು ಮುದ್ದಪ್ಪ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಬೆಳೆಗಾರ ಮಂಡೇಪಂಡ ಮಣಿ ಮಾದಯ್ಯ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಮಂಡೇಪಂಡ ಸುಜಾ ಕುಶಾಲಪ್ಪ, ಚೇಂದಂಡ ನವೀನ್ ಪೊನ್ನಪ್ಪ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕೊಡವ ಅಸೋಸಿಯೇಶನ್ನಿನ ಅಧ್ಯಕ್ಷ ಚಾರಿಮಂಡ ಬಾನು ಬೋಪಣ್ಣ ವಹಿಸಲಿದ್ದಾರೆ. ಕ್ರೀಡಾಕೂಟವು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ಗಂಟೆಯ ತನಕ ನಡೆಯಲಿದೆ ಎಂದು ತಿಳಿಸಿದ್ದಾರೆ.