ಚೆಟ್ಟಳ್ಳಿ, ಆ. 31: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದ ನದಿ ಉಕ್ಕಿ ಹರಿದ ಪರಿಣಾಮ ನದಿ ದಡದ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ ಮನೆಯಲಿದ್ದ ವಸ್ತುಗಳನ್ನು ಕಳೆದುಕೊಂಡು ಸಂಕಷ್ಟ ಎದುರಿಸುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ಚಾಮಿಯಾಲ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆ ವತಿಯಿಂದ ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆ ಮಾಡಲಾಯಿತು

ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳುಳ್ಳ ಪರಿಹಾರ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಚಾಮಿಯಾಲ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಅಧ್ಯಕ್ಷ ಕೆ.ಎಂ. ನಝೀರ್, ಕಾರ್ಯದರ್ಶಿ ಕೆ.ಎ. ಸಫ್ವಾನ್, ಸಹ ಕಾರ್ಯದರ್ಶಿ ಕೆ.ಎಂ. ಸಫೀಕ್, ಪ್ರಮುಖರಾದ ನೌಷಾದ್, ಅಲ್ತಾಫ್, ರಿಯಾಜ್, ಅಬ್ದುಲ್ ಗನಿ, ಹನೀಫಾ, ಹಂಸ ಮತ್ತಿತರರು ಇದ್ದರು.