ವೀರಾಜಪೇಟೆ, ಆ. 31: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವೀರಾಜಪೇಟೆಯ ತೂಕ್‍ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ವೀರಾಜಪೇಟೆ ಪರಿಷತ್ತಿನ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.

ಸೆಪ್ಟೆಂಬರ್ 29 ರಂದು ಜಿಲ್ಲಾಮಟ್ಟದಲ್ಲಿ ನಡೆಯುವ ಕವಿಗೋಷ್ಠಿಗೆ ಜಿಲ್ಲೆಯ ಕವಿ ಸಾಹಿತಿಗಳಿಂದ ಕವನ ಆಹ್ವಾನಿಸಲಾಗಿದೆ. ಇದು ಬಹುಭಾಷಾ ಕವಿಗೋಷ್ಠಿಯಾಗಿದ್ದು, ಚುಟುಕುಗಳು, ಹನಿ ಕವನಗಳು ಹಾಗೂ ನೀಳ್ಗ್‍ವನಗಳಿಗೆ ಅವಕಾಶ ನೀಡಲಾಗುವದು. ಭಾಗವಹಿಸುವ ಕವಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ನೀಡಲಾಗುವದು.

ಕವಿಗಳು ಸೆಪ್ಟೆಂಬರ್ 20 ರೊಳಗಾಗಿ ತಮ್ಮ ಸ್ವರಚಿತ ಕವನಗಳನ್ನು ಅಧ್ಯಕ್ಷರು, ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮೂರ್ನಾಡು ರಸ್ತೆ, ವೀರಾಜಪೇಟೆ ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ಸಹ ಕಾರ್ಯದರ್ಶಿ ಹಾಗೂ ಗೋಷ್ಠಿಯ ಸಂಚಾಲಕಿ ಬಡಕಡ ರಜಿತಾ ಕಾರ್ಯಪ್ಪ, ಇವರನ್ನು ಮೊ: 9481771851 ಸಂಪರ್ಕಿಸಬಹುದಾಗಿದೆ.