ವೀರಾಜಪೇಟೆ, ಆ. 31: ಜನಸಂಖ್ಯೆ ಸ್ಫೋಟದಿಂದ ಭಾರತ ದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಜೀವನದಲ್ಲಿ ಶ್ರದ್ಧೆ ಮತ್ತು ಛಲದಿಂದ ಮುನ್ನೆಡೆದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮುಳಿಯ ಸಂಸ್ಥೆಯ ಮಾಲೀಕ ಕೇಶವ ಪ್ರಸಾದ್ ಹೇಳಿದರು.
ವೀರಾಜಪೇಟೆ ಲಯನ್ಸ್ ಸಂಸ್ಥೆ ವತಿಯಿಂದ ಮಗ್ಗುಲದ ನಿರ್ಮಲರಮಣ ನರ್ಸಿಂಗ್ ಸ್ಕೂಲ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಮಹಿಳೆಯ ವೈಯುಕ್ತಿಕ ಅಭಿವೃದ್ಧಿಯ ಗುರಿ ಮತ್ತು ಸಾಧನೆಯ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಕೋಪದಿಂದ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ, ಶ್ರದ್ಧೆಯಿಂದ ಮುನ್ನೆಡೆದರೆ ಉತ್ತಮ ಬದುಕು ಮತ್ತು ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಕೇಶವ ಪ್ರಸಾದ್ ಹೇಳಿದರು.
ಜೂನಿಯರ್ ಚೆಂಬರ್ ಇಂಟರ್ ನ್ಯಾಶನಲ್‍ನ ಮದೋಶ್ ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಜೀವನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದರು
ನಿರ್ಮಲರಮಣ ನರ್ಸಿಂಗ್ ಸ್ಕೂಲ್ ವ್ಯವಾಸ್ಥಪಕ ವಿಕ್ರಮ್ ಚಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಲಯನ್ಸ್ ಅಧ್ಯಕ್ಷ ಪೌಲ್ ಕ್ಷೇವಿಯರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಮಂಡೆಟೀರ ಸುರೇಶ್, ಮಾಜಿ ಅಧ್ಯಕ್ಷ ತ್ರಿಶು ಗಣಪತಿ, ಸದಸ್ಯರಾದ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಪ್ರಧಾನ್ ತಮ್ಮಯ್ಯ, ನಿಯಾಜ್ ಇತರರು ಉಪಸ್ಥಿತರಿದ್ದರು.