ಮಡಿಕೇರಿ, ಆ. 31 : ನಗರದ ಪ್ರತಿಷ್ಠಿತ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ.2ರ ಗಣೇಶೋತ್ಸವದಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಬೆಳಿಗ್ಗೆ 10.30 ರಿಂದ ಸಾಮೂಹಿಕ ಗÀಣಹೋಮ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 12 ಗಂಟೆಗೆ ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಿದ್ದು, ದೇವಾಲಯವು ಮುಂಜಾನೆ 6 ರಿಂದ 12 ಹಾಗೂ ಸಂಜೆ 5 ರಿಂದ 8ರವರೆಗೆ ತೆರೆದಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.