ಸೋಮವಾರಪೇಟೆ, ಆ. 31: ತಾಲೂಕಿನ ನಿಡ್ತ ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ, ಉರುಳು ಹಾಕಿ ವನ್ಯಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಅಳಿಲುಗುಪ್ಟೆ ಗ್ರಾಮದ ಎ.ಕೆ. ಪ್ರಸನ್ನ, ಎ.ಎನ್. ಮಲ್ಲೇಶ್, ಅರಗಲ್ಲು ಗ್ರಾಮದ ಎ.ಎನ್. ಪುಷ್ಪರಾಜು ಬಂಧಿತ ಆರೋಪಿಗಳು. ಬಂಧಿ ತರಿಂದ ಒಂದು ಬೈಕ್, ಉರುಳು, ಟಾರ್ಚ್‍ಗಳು ಹಾಗೂ ಮೊಬೈಲ್‍ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎ.ಸಿ.ಎಫ್. ನೆಹರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಸೋಮವಾರಪೇಟೆ ಆರ್.ಎಫ್.ಒ. ಶಮಾ, ಡಿ.ಆರ್.ಎಫ್.ಒ., ಪುನೀತ್, ಸಿಬ್ಬಂದಿಗಳಾದ ರಾಜಣ್ಣ, ಯೋಗೇಶ್, ಸಂದೀಪ್, ಅಂತೋಣಿ ಅವರುಗಳು ಭಾಗವಹಿಸಿದ್ದರು.