ಮಡಿಕೇರಿ, ಆ. 30: ಮಡಿಕೇರಿ ಎಂ.ಎಂ. ಜಮಾತ್‍ನ ನೂತನ ಅಧ್ಯಕ್ಷರಾಗಿ ಕೆ. ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಎಂ.ಎಂ. ಹಾರೂನ್ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಟಿ.ಐ. ಸಲಾಹುದ್ದೀನ್ ಹಾಗೂ ಎಂ.ಎ. ಸುಲೈಮಾನ್ ಆಯ್ಕೆಗೊಂಡಿದ್ದಾರೆ. ಕೆ.ಎಂ. ಅಬ್ದುಲ್ ಅಜೀಜ್ ಹಾಗೂ ಎಂ.ಎ. ಮುನೀರ್ ಮಾಚಾರ್ ಜಂಟಿ ಕಾರ್ಯದರ್ಶಿಗಳಾಗಿದ್ದಾರೆ. ರಿಯಾಜ್ ಹಾಜಿ ಅವರು ಕೋಶಾಧಿಕಾರಿಯಾಗಿ ಆಯ್ಕೆಗೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ 10 ಮಂದಿ ಆಯ್ಕೆಗೊಂಡಿದ್ದಾರೆ.

ಜಮಾತ್ ಅಧ್ಯಕ್ಷ ಕೆ. ಹಮೀದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಜಮಾತ್‍ನ ಖತೀಬ್ ಹಮೀದ್ ಮದನಿ ಪ್ರಾರ್ಥನಾ ಕಾರ್ಯನೆರವೇರಿಸಿದರು. ಕಾರ್ಯದರ್ಶಿ ಎಂ.ಎಂ. ಹಾರೂನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.