ಮಡಿಕೇರಿ, ಆ. 30: ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ತಾ. 31 ರಂದು (ಇಂದು) ಬೆಳಿಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸಂಪಾಜೆ ಹೋಬಳಿ ಘಟಕದ ಪದಗ್ರಹಣ ಸಮಾರಂಭ ಮತ್ತು ರಾಷ್ಟ್ರ ಮಟ್ಟದಲ್ಲಿ ನಮ್ಮ ಗ್ರಾಮವನ್ನು ಗುರುತಿಸಿ ಸಂಪಾಜೆ ಗ್ರಾಮಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾದ ದಿ. ಬಾಲಚಂದ್ರ ಕಳಗಿ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಲಿದೆ.