ಸೋಮವಾರಪೇಟೆ, ಆ. 31: ಇಲ್ಲಿನ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಮತ್ತು ಅರಣ್ಯ ಇಲಾಖೆಯ ಆಶ್ರಯದಲ್ಲಿ ಕಾಜೂರು ಅರಣ್ಯದೊಳಗೆ ಬೀಜದುಂಡೆಗಳನ್ನು ಬಿತ್ತಲಾಯಿತು.

ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಅರಣ್ಯದೊಳಗೆ ಕಾಡಾನೆಗಳಿಗೆ ಬೇಕಾಗುವಷ್ಟು ಆಹಾರ ಸಿಗುತ್ತಿಲ್ಲ. ಆನೆಗಳು ಆಹಾರಕ್ಕಾಗಿ ಗ್ರಾಮಗಳಿಗೆ ನುಗ್ಗಿ ಕೃಷಿ ಫಸಲನ್ನು ಹಾಳು ಮಾಡುತ್ತಿವೆ. ಕಾಡಾನೆಗಳಿಗೆ ಆಹಾರವಾಗುವ ಗಿಡಗಳನ್ನು ಕಾಡಿನಲ್ಲಿ ಬಿತ್ತಲಾಗಿದೆ ಎಂದು ಲಯನ್ಸ್ ಅಧ್ಯಕ್ಷ ಮಣವಟ್ಟಿರ ಹರೀಶ್ ಹೇಳಿದರು. ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ತೇಜಸ್ವಿ, ಖಜಾಂಚಿ ರಾಮಚಂದ್ರ, ಮಾಜಿ ಅಧ್ಯಕ್ಷ ಎ.ಎಸ್. ಮಹೇಶ್, ಯೋಗೇಶ್, ಲೀಲಾರಾಂ, ಜಗದೀಶ್, ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಜಿಲ್ಲಾ ಸಹಾಯಕ ರಾಜ್ಯಪಾಲ ಪಿ. ನಾಗೇಶ್, ಕಾರ್ಯದರ್ಶಿ ಲೋಕೇಶ್ ಇದ್ದರು.