ಗೋಣಿಕೊಪ್ಪ ವರದಿ, ಆ. 31: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಸ್ಥಳೀಯ ಪೊಲೀಸ್ ಠಾಣೆಯ ನಾಲ್ವರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಮಹಿಳಾ ಸಿಬ್ಬಂದಿಗಳಾದ ಶೋಭಾ ಶ್ರೀನಿವಾಸ್, ಪ್ರಮೀಳಾ, ಗಂಗಮ್ಮ, ಕೆ.ಟಿ. ಶೋಭಾ ಸನ್ಮಾನ ಸ್ವೀಕರಿಸಿದರು. ಠಾಣೆಯ ಉಳಿದ 31 ಸಿಬ್ಬಂದಿಗಳಿಗೆ ಸನ್ಮಾನ ಪತ್ರ ನೀಡುವ ಮೂಲಕ ಗೌರವಿಸಲಾಯಿತು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷ ಕೊಣಿಯಂಡ ಕಾವ್ಯ ಸಂಜು ಮಾತನಾಡಿ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರನ್ನು ಗೌರವಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವೃತ್ತ ನಿರೀಕ್ಷಕ ದಿವಾಕರ್, ಉಪನಿರೀಕ್ಷಕ ಮಂಚಯ್ಯ, ಜೆಸಿಐ ಪೊನ್ನಂಪೇಟೆ ಗೋಲ್ಡನ್ ಪ್ರಮುಖರಾದ ಕಳ್ಳಿಚಂಡ ಸುಮಿ ರಾಬಿನ್, ಮಂಡಂಗಡ ಪುನಿತಾ, ಚೆಪ್ಪುಡೀರ ಪ್ರತೀಮಾ, ಲೇಖಾ ನಟೇಶ್, ಆಶಿತಾ ಮೊಣ್ಣಪ್ಪ ಉಪಸ್ಥಿತರಿದ್ದರು.