ಕರಿಕೆ, ಆ. 31: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಇದರ ವತಿಯಿಂದ ಮನೆ-ಮನೆ ಉಳಿತಾಯ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಬೇಕಲ್ ಶರಣ್ ಕುಮಾರ್ ಮಾತನಾಡಿ, ಗ್ರಾಮದಲ್ಲಿ ಮದ್ಯಮ ವರ್ಗದ ರೈತರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಾಗಿರುವದರಿಂದ ಇವರಿಗೆ ಸಾಲ ಮರುಪಾವತಿ ಸಂದರ್ಭದಲ್ಲಿ ಈ ಹಣ ಪ್ರಯೋಜನಕ್ಕೆ ಬರುತ್ತದೆ ಎಂಬದಾಗಿ ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಗಂಗಾಧರ್, ಸಂಘದ ಸದಸ್ಯರಾದ ಕಟ್ಟಕೋಡಿ ರಘುರಾಮ, ಹೊಸಮನೆ ಹರೀಶ್, ಮೀನಾಕ್ಷಿ, ಗುಣಶೀಲ, ಭಾರ್ಗವ್, ಜಯಪ್ರಕಾಶ್ ಸೇರಿದಂತೆ ಇತರ ಸದಸ್ಯರು ಫಲಾನುಭವಿಗಳು ಪಾಲ್ಗೊಂಡಿದ್ದರು. - ಸುಧೀರ್