ಮಡಿಕೇರಿ, ಆ. 31: ಹಿರಿಯ ರಾಜಕಾರಣಿ ಎ.ಕೆÀ.ಸುಬ್ಬಯ್ಯ ಅವರ ವಿಚಾರಧಾರೆಗಳನ್ನು ಜೀವಂತವಾ ಗಿರಿಸುವ ಉದ್ದೇಶದಿಂದ ರಾಜ್ಯಮಟ್ಟದ ಸಂಸ್ಮರಣಾ ಕಾರ್ಯಕ್ರಮವೊಂದನ್ನು ಆಯೋಜಿಸಲು ಚಿಂತನೆ ನಡೆಸಲಾಗಿದ್ದು, ತಾ.6 ರಂದು ಪೂರ್ವಭಾವಿ ಸಭೆ ನಡೆಸಲು ಎಕೆಎಸ್ ಒಡನಾಡಿಗಳು ನಿರ್ಧರಿಸಿದ್ದಾರೆÀ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿ.ಪಿ.ಶಶಿಧರ್ ಹಾಗೂ ಇತರರು, ಎ.ಕೆ. ಸುಬ್ಬಯ್ಯ ಅವರ ಕನಿಷ್ಟ ಆಶಯ ಮತ್ತು ಕನಸುಗಳನ್ನು ಯಾವದೇ ಕಾರಣಕ್ಕೂ ಸಮಾಧಿಯಾಗಲು ಬಿಡಬಾರದು. ಈ ಹಿನ್ನೆಲೆಯಲ್ಲಿ ಎಕೆಎಸ್ ಅವರ ಸ್ಮಾರಕ ಟ್ರಸ್ಟ್ ನಿರ್ಮಾಣ ಮಾಡಿ, ಅದರ ಮೂಲಕ ಹಲವಾರು ಕಾರ್ಯಕ್ರಮ ಗಳನ್ನು ನಿರಂತರವಾಗಿ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದರು.

ತಾ.6 ರಂದು ಬೆಳಗ್ಗೆ 11 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪÀೂರ್ವಭಾವಿ ಸಭೆ ನಡೆಸುವದರೊಂದಿಗೆ, ಶ್ರದ್ಧಾಂಜಲಿ ಅರ್ಪಿಸಲಾಗುವದು. ರಾಜ್ಯ ಮಟ್ಟದ ಸಂಸ್ಮರಣಾ ಕಾರ್ಯಕ್ರಮವನ್ನು ಮಡಿಕೇರಿಯಲ್ಲಿ ಆಯೋಜಿಸುವ ಬಗ್ಗೆ ವಿಸ್ತøತವಾಗಿ ಚರ್ಚಿಸಲಾಗುವದೆಂದರು.

ಎ.ಕೆ.ಸುಬ್ಬಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಗೌರವ ನೀಡಿಲ್ಲ

ರಾಜಕೀಯ ಮುತ್ಸದ್ಧಿ ಹಾಗೂ ವಿಧಾನ ಪರಿಷತ್ತಿನ ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದ್ದ ಎ.ಕೆ.ಸುಬ್ಬಯ್ಯ ಅವರ ಅಂತ್ಯಸಂಸ್ಕಾರ ಸಂದರ್ಭ ಕನಿಷ್ಟ ಸೌಜನ್ಯಕ್ಕಾದರೂ ಜಿಲ್ಲಾಡಳಿತ ಗೌರವ ನೀಡದಿರುವದು ಅವಮಾನಕರ ಎಂದು ವಿ.ಪಿ. ಶಶಿಧರ್ ಹಾಗೂ ಬಿ.ಎನ್. ಮನುಶೆಣೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಕೆಎಸ್ ಒಡನಾಡಿಗಳಾದ ಕೆ.ಆರ್.ವಿದ್ಯಾಧರ್, ನೆರವಂಡ ಉಮೇಶ್, ಬಿ.ಎನ್. ಮನುಶೆಣೈ, ಬಿ.ಎಸ್. ರಮಾನಾಥ್ ಹಾಗೂ ಡಿ.ಎಸ್. ನಿರ್ವಾಣಪ್ಪ ಉಪಸ್ಥಿತರಿದ್ದರು.