ಚೆಟ್ಟಳ್ಳಿ, ಆ. 31: ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಇದರ ಸದಸ್ಯತ್ವ ಅಭಿಯಾನಕ್ಕೆ ನಾಪೋಕ್ಲು ಸಮೀಪದ ಕೊಳಕೇರಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಹದಿ ಬೆಂಗಳೂರು ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಎಸ್.ವೈ.ಎಸ್ ಅಧ್ಯಕ್ಷರಾದ ಹಫೀಲ್ ಸಹದಿ ವಹಿಸಿದ್ದರು. ಈ ಸಂದರ್ಭ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬುಸುಫಿಯಾನ್ ಇಬ್ರಾಹಿಂ ಮದನಿ, ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಟಣ, ಅಬ್ದುಲ್ ಹಕೀಂ ಕೊಡ್ಲಿಪೇಟೆ, ಡಾ. ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಟಿ.ಹೆಚ್. ಮುಹಯದ್ದೀನ್ ಹಾಜಿ ಇದ್ದರು. ಹನೀಫ್ ರಹ್ಮಾನಿ ಸ್ವಾಗತಿಸಿ, ವಂದಿಸಿದರು.ಚೆಟ್ಟಳ್ಳಿ: ಸೋಮವಾರಪೇಟೆ ಬ್ರಾಂಚ್ ವತಿಯಿಂದ ಎಸ್.ವೈ.ಎಸ್. ಸದಸ್ಯತ್ವ ಅಭಿಯಾನಕ್ಕೆ ಎಸ್.ವೈ.ಎಸ್ ಸೋಮವಾರಪೇಟೆ ಸೆಂಟರ್ ಕಾರ್ಯದರ್ಶಿ ಸಮದ್ ನಿಜಾಮಿಯವರಿಂದ ಆದಮ್ ಹಾಜಿಯವರಿಗೆ ಸದಸ್ಯತ್ವ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.

ಸಭೆಯಲ್ಲಿ ಎಸ್.ವೈ.ಎಸ್ ಜಿಲ್ಲಾ ಸದಸ್ಯರಾದ ಅಲೀ ಸಖಾಫಿ ಹಾಗೂ ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಸಖಾಫಿ, ಸದಸ್ಯರಾದ ಅಬ್ಬಾಸ್, ಯಾಕುಬ್, ಸುಲೈಮಾನ್ ಹಾಜಿ ಖಾದರ್ ಹಾಗೂ ಎಸ್.ಎಸ್.ಎಫ್. ಕಾರ್ಯಕರ್ತರಾದ ಸ್ವಾಧಿಕ್ ಕರ್ಕಳ್ಳಿ, ಆಸಿಫ್, ತಫ್ಸೀರ್ ಪಾಲ್ಗೊಂಡಿದ್ದರು.