ಗುಡ್ಡೆಹೊಸೂರು, ಆ. 31: ಇಲ್ಲಿನ ಹಾರಂಗಿ ರಸ್ತೆಯ ಬೊಳ್ಳ್ಳೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ 8.30 ಗಂಟೆಗೆ ಜಿಲ್ಲಾ ಉಪವಿಭಾಗಾಧಿಕಾರಿ ಪ್ರಯಾಣಿಸುತ್ತಿದ್ದ ಬೊಲೆರೋ ವಾಹನ ಗಬ್ಬದ ಹಸುವಿಗೆ ಡಿಕ್ಕಿಯಾಗಿ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ.
ಇಲ್ಲಿನ ನಿವಾಸಿ ಕೆ.ಜಿ. ಮನುಶೆಟ್ಟಿ ಎಂಬವರಿಗೆ ಸೇರಿದ ಹಸುವಿಗೆ ವಾಹನ ಡಿಕ್ಕಿಯಾಗಿದೆ. ಹಾರಂಗಿಗೆ ಸಚಿವ ಸುರೇಶ್ ಕುಮಾರ್ ಅವರು ಬಾಗಿನ ಬಿಡಲು ಆಗಮಿಸುವ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಸಂದÀರ್ಭ ವಾಹನ ವೇಗದಲ್ಲಿದ್ದುದರಿಂದ ಈ ಅವಘಡ ನಡೆದಿದೆ. ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಕೂಡ ಈ ಘಟನೆಯನ್ನು ವೀಕ್ಷಿಸಿದ್ದಾರೆ. ಮನು ಅವರು ತಮ್ಮ ಹೊಲಕ್ಕೆ ಮೇಯಿಸಲು ಸಾಗಿಸುವ ಸಂದÀರ್ಭ ಈ ಘಟನೆ ನಡೆದಿದೆ. ಕುಶಾಲನಗರದ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
-ಗಣೇಶ್