ಗುಡ್ಡೆಹೊಸೂರು, ಆ. 29: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಇಲ್ಲಿನ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ಬಿ.ವಿ. ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಹಾಸನ ಹಾಲು ಒಕ್ಕೂಟದ ಕೊಡಗು ವಿಭಾಗದ ಕೆ.ಕೆ. ಹೇಮಂತ್ ಕುಮಾರ್ ಹಾಜರಿದ್ದರು. ಸಂಘದ ಕಾರ್ಯದರ್ಶಿ ಬಿ.ಪಿ. ಗುರುಬಸಪ್ಪ ಅವರು ಸದಸ್ಯರನ್ನು ಸ್ವಾಗತಿಸಿ, ವಾರ್ಷಿಕ ಲೆಕ್ಕಾಚಾರವನ್ನು ಸಭೆಯ ಮುಂದೆ ಮಂಡಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎ.ಯು. ಕಿರಣ್ ಕುಮಾರ್ ಮತ್ತು ಸಂಘದ ನಿರ್ದೇಶಕರು ಮತ್ತು ಗ್ರಾ.ಪಂ. ಅಧ್ಯಕೆÀ್ಷ ಕೆ.ಎಸ್. ಭಾರತಿ ಮತ್ತು ನಿರ್ದೇಶಕರಾದ ಪಿ.ಬಿ. ಯತೀಶ್, ಬಿ.ಎಸ್. ಧನಪಾಲ್, ಪಿ.ಬಿ. ಕಾವೇರಪ್ಪ, ಬಿ.ಡಿ. ವೀರೇಂದ್ರ, ಬಿ.ಎಂ. ಸಾಗರ್, ಬಿ.ಸಿ. ಯತೀಶ್, ಸಿ.ಬಿ. ಪಳಂಗಪ್ಪ, ಎಸ್.ಪಿ. ಸುಲೋಚನ, ಎಸ್.ಆರ್. ಕಮಲ ಬಿ.ಎಸ್. ದಿನೇಶ್ ಮತ್ತು 100ಕ್ಕೂ ಹೆಚ್ಚು ಸದಸ್ಯರು ಹಾಜರಿದ್ದರು.
- ಗಣೇಶ್ ಕುಡೆಕ್ಕಲ್.