ಮಡಿಕೇರಿ, ಆ. 29: ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಂತ್ರಸ್ತರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಈ ವೇಳೆ ಗುಹ್ಯ ಮಸೀದಿಯ ಆವರಣದಲ್ಲಿ ಸಂತ್ರಸ್ತರ ಜೊತೆಗೆ ಸಭೆ ನಡೆಸಿದ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಈಗಾಗಲೇ ಸರಕಾರದಿಂದ ರೂ. 10 ಸಾವಿರ ಹಾಗೂ ಕಿಟ್ಟನ್ನು ವಿತರಿಸಲಾಗಿದೆ. ಬಾಡಿಗೆ ಮನೆಗಳಿಗೆ ತೆರಳುವವರಿಗೆ 10 ತಿಂಗಳವರೆಗೆ ಪ್ರತಿ ತಿಂಗಳಿಗೆ ರೂ. 5 ಸಾವಿರ ನೀಡಲಾಗುವದು. ದಾಖಲೆ ರಹಿತ ಮನೆಗಳನ್ನು ಕಳೆದು ಕೊಂಡವರಿಗೆ ಹಂತ ಹಂತವಾಗಿ ರೂ. 5 ಲಕ್ಷ ನೀಡಲಾಗುವದು. ಅಲ್ಲದೆ ಈ ಭಾಗದಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಿ, ಸಂತ್ರಸ್ತರಿಗೆ ಸರಕಾರದ ವತಿಯಿಂದ ಶಾಶ್ವತ ಪರಿಹಾರ ರೂಪಿಸುವದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಭೇಟಿ ಹಾಗೂ ಭರವಸೆ ಬಳಿಕ ಸಂತ್ರಸ್ತರು ಪ್ರತಿಭಟನೆಯನ್ನು ಕೈ ಬಿಟ್ಟರು. ಈ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಸಿ.ಐ. ಅನೂಪ್ ಮಾದಪ್ಪ, ಸುಂದರ್‍ರಾಜ್, ಪಿಡಿಓ ವಿಶ್ವನಾಥ್, ಪ್ರಮುಖರಾದ ರೆಜಿತ್‍ಕುಮಾರ್, ವಿ.ಕೆ. ಬಶೀರ್, ಚಂದ್ರ, ಮುಸ್ತಫ ಮತ್ತಿತರರು ಇದ್ದರು. ಸಂತ್ರಸ್ತರು ಮುಖ್ಯಮಂತ್ರಿ ಭೇಟಿ ಸಂದರ್ಭ ಪ್ರತಿಭಟಿಸಲು ನಿರ್ಧರಿಸಿದ್ದರಿಂದ ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಮಾತುಕತೆ ನಡೆಸಿದರು.