ನಾಪೆÇೀಕ್ಲು, ಆ. 29: ಹುಣಸೂರಿನ ಅಂಬಿದೇಕರ್ ಭವನದಲ್ಲಿ ನಡೆದ ಮೈಸೂರು ವಲಯ ಕ್ರೀಡೆ ಮತ್ತು ನೃತ್ಯ ಚಾಂಪಿಯನ್‍ಶಿಪ್‍ನಲ್ಲಿ ಸುರಕ್ಷಾ ವೈಲಾಯ ಏಕವ್ಯಕ್ತಿ ಶಾಸ್ತ್ರೀಯ ನೃತ್ಯ, ಜೋಡಿ ಶಾಸ್ತ್ರೀಯ ನೃತ್ಯ ಹಾಗೂ ಏಕವ್ಯಕ್ತಿ ಪಾಶ್ಚಿಮಾತ್ಯ ನೃತ್ಯದಲ್ಲಿ ಚಿನ್ನದ ಪದಕ ಪಡೆಯುವದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈಕೆ ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ ಅವರ ಶಿಷ್ಯೆಯಾಗಿದ್ದು, ಅಮ್ಮತ್ತಿ-ಒಂಟಿಯಂಗಡಿ ಗ್ರಾಮದ ಶಂಕರ ವೈಲಾಯ ಹಾಗೂ ಉಷಾ ಶಂಕರ್ ದಂಪತಿಯ ಪುತ್ರಿಯಾಗಿದ್ದಾಳೆ.