ಚೆಟ್ಟಳ್ಳಿ, ಆ. 29: ಎಸ್.ವೈ.ಎಸ್. ಸದಸ್ಯತ್ವ ಅಭಿಯಾನದ ಅಂಗವಾಗಿ ಮಾಲ್ದಾರೆ ಬ್ರಾಂಚ್ ಸಮಿತಿಯು ರಕ್ತ ಗುಂಪು ಪರಿಶೀಲನಾ ಶಿಬಿರವನ್ನು ಆಯೋಜಿಸಲಾಗಿತ್ತು. ಅಸ್ಕರ್ ಝೈನಿ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಉದ್ಘಾಟಿಸಿದರು. ಸಾರ್ವಜನಿಕರು ಭಾಗವಹಿಸಿ ರಕ್ತ ಪರಿಶೀಲನೆ ನಡೆಸಿದರು.

ಎಸ್‍ವೈಎಸ್ ಸದಸ್ಯತ್ವ ಅಭಿಯಾನ ಶಿಬಿರವನ್ನು ಪಾಲಿಬೆಟ್ಟ ಸೆಂಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಮುಸ್ಲಿಯಾರ್ ಚಾಲನೆ ನೀಡಿದರು. ಮಾಲ್ದಾರೆ ಜಮಾಅತ್ ಅಧ್ಯಕ್ಷ ಮೊಯ್ದಿನ್, ಸದಸ್ಯರಾದ ಹುಸೈನ್, ಇಬ್ರಾಹಿಂ ಹಾಗೂ ಉಸ್ಮಾನ್ ಬಾಪು ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು