ಮಡಿಕೇರಿ, ಆ. 29: ಗಾನಶ್ರುತಿ ಎಂ.ಕೆ. ಇವರು ಬೆಂಗಳೂರಿನ ‘ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ’ ಸಂಶೋಧನಾ ಸಂಸ್ಥೆಯ ಪ್ರೊ. ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು, ಸಾದರಪಡಿಸಿದ ‘ಎ ಸ್ಟಡಿ ಆನ್ ಪ್ರೊಡಕ್ಷನ್ ಅಂಡ್ ಮಾರ್ಕೆಟಿಂಗ್ ಆಫ್ ಕಾಫಿ ಇನ್ ವೆಸ್ಟರ್ನ್ ಘಾಟ್ಸ್, ರೀಜನ್ ಆಫ್ ಕರ್ನಾಟಕ’ ಎಂಬ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪ್ರಸ್ತುತ ಇವರು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮೈಸೂರಿನಲ್ಲಿ ಅರ್ಥಶಾಸ್ತ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಮಡಿಕೇರಿಯ ಜಯನಗರ ನಿವಾಸಿ, ನಿವೃತ್ತ ಕಂದಾಯಾಧಿಕಾರಿ ಮಂಞಪುರ ಕೇಶವ ಹಾಗೂ ಎಂ.ಪಿ. ಮೀನಾಕ್ಷಿ ಕಂದಾಯ ಇಲಾಖೆ (ನಿವೃತ್ತ) ದಂಪತಿಯ ಪುತ್ರಿ.