ಸೋಮವಾರಪೇಟೆ, ಆ. 29: ಕೆಲವರು ತಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಇನ್ನು ಕೆಲವರು ಕರ್ತವ್ಯವನ್ನು ಸೇವೆಯೆಂದು ಪರಿಗಣಿಸಿ;ಹೊಸತನಗಳಿಗೆ ತೆರೆದುಕೊಳ್ಳುತ್ತಾ ಸಾಗುತ್ತಾರೆ. ಇನ್ನೂ ಕೆಲವರು ಈ ಎಲ್ಲಾ ಗುಣಗಳೊಂದಿಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಇತರರಿಗೂ ಹಂಚುತ್ತಾರೆ.., ಅವರನ್ನೂ ಪ್ರೋತ್ಸಾಹಿಸುತ್ತಾರೆ. ಈ ಸಾಲಿಗೆ ಸೇರಿದ ಶಿಕ್ಷಕ ಸುರೇಶ ಮರಕಾಲ ಅವರಿಗೆ ಇದೀಗ ರಾಷ್ಟ್ರ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.ಶಿಕ್ಷಣ ಇಲಾಖೆಗೆ ಸೇರುವ ಮೊದಲು ಪೊಲೀಸ್ ಇಲಾಖೆಯಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುರೇಶ್ ಅವರು, ಬಿ.ಎಡ್.ನಲ್ಲಿ ಪ್ರಥಮ ಶ್ರೇಣಿಯೊಂದಿಗೆ 4 ಚಿನ್ನದ ಪದಕಗಳನ್ನು ಪಡೆಯುವದರೊಂದಿಗೆ 2010ರಲ್ಲಿ ಪ್ರಧಾನ ಮಂತ್ರಿ ಪುರಸ್ಕಾರಕ್ಕೂ ಭಾಜನರಾದವರು. ಇದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 69 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆಯೂ ಆಯಿತು. ಇಷ್ಟೆಲ್ಲಾ ಸಾಧನೆಯ ಶಿಖರ ಏರಿರುವ ಸುರೇಶ್ ಅವರು, ಇದೀಗ ಸೋಮವಾರಪೇಟೆ ತಾಲೂಕಿನ ಬೆಸೂರು ಸರಕಾರಿ ಪ್ರೌಢಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಇವರಿಗೆ (ಮೊದಲ ಪುಟದಿಂದ) ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿರುವದು ಜಿಲ್ಲೆಗೆ ಸಂದ ಗೌರವವೂ ಆಗಿದೆ. ಸುರೇಶ್ ಅವರು ಕರ್ತವ್ಯದಲ್ಲಿ ನಾವೀನ್ಯತೆಗೆ ಹೆಸರುವಾಸಿ. ಅವರ ಚಟುವಟಿಕೆಗಳು ಇತರ ಎಲ್ಲಾ ಶಿಕ್ಷಕರಿಗೂ ಮಾದರಿ. ಹಳ್ಳಿಯ ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಣವನ್ನು ವೈವಿಧ್ಯಮಯವಾಗಿ ಹಾಗೂ ಖುಷಿಯ ವಾತಾವರಣದಲ್ಲಿ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ 'ಜೀವನ ಶಿಕ್ಷಣ' ನೀಡುತ್ತಿರುವ ಸುರೇಶ ಮರಕಾಲ ಸಾಹೇಬರಕಟ್ಟೆ ಇವರಿಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ನೀಡಲಾಗುವ ಪ್ರಸ್ತುತ ವರ್ಷದ 'ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ' ಲಭಿಸಿದೆ.

ಕಲಿಕೆಯನ್ನು ಲವಲವಿಕೆಯಿಂದ ಮೂಡಿ ಸುವ ಉದ್ದೇಶದಿಂದ, ಔಪಚಾರಿಕ ಕಲಿಕೆಯ ಜೊತೆಗೆ ಮಕ್ಕಳಿಗೆ ಶಾಡೋಪ್ಲೇ, ಕನ್ನಡಿ ಬರಹ, ಪಿಯಾನೋ ಕೀಬೋರ್ಡ್ ಕಲಿಕೆ, ನಾಟಕಾಭಿನಯ, ಥರ್ಮೋಫೋಮ್-ಪೇಪರ್ ಕ್ರಾಫ್ಟ್ ಕಾರ್ಯಾಗಾರಗಳು, ತೋಟಗಾರಿಕೆ ಶಿಕ್ಷಣ, ಪ್ಲಬಿಂಗ್ ಶಿಕ್ಷಣ, ಚಿತ್ರಕಲೆ, ಗೋಡೆ ಪೈಂಟಿಂಗ್, ಸಂಗೀತ ಮೊದಲಾದವಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಸಕಲಕಲಾವಲ್ಲಭರಾಗಿದ್ದಾರೆ.

ಸ್ವತಃ ಶ್ಯಾಡೋಪ್ಲೇ ಕಲಾವಿದರಾಗಿ ರುವ ಶಿಕ್ಷಕ ಸುರೇಶ ಮರಕಾಲ ಅವರು, ತಮ್ಮ ಶಿಷ್ಯ ವೃಂದ್ಯಕ್ಕೂ ಅದನ್ನು ಧಾರೆ ಎರೆಯುತ್ತಿದ್ದಾರೆ. ಪರಿಣಾಮ ಶಾಲೆಯ ಬಹುತೇಕ ಮಕ್ಕಳು ಇಂದು ಶ್ಯಾಡೋಪ್ಲೇ (ಕೈಬೆರಳ ನೆರಳಾಟ)ನಲ್ಲಿ ಪ್ರತಿಭೆಯನ್ನು ಓರೆಗೆ ಹಚ್ಚುತ್ತಿದ್ದಾರೆ. 8ರಿಂದ 10ನೇ ತರಗತಿಯ ಬಹುತೇಕ ಎಲ್ಲಾ ಮಕ್ಕಳು ಕನ್ನಡಿ ಬರಹವನ್ನು ಇವರಿಂದ ಕಲಿತಿದ್ದಾರೆ.

ಶಾಲೆಯಲ್ಲಿ ಪರಿಸರ ಸ್ನೇಹಿ 'ತೋಟಗಾರಿಕಾ ಶಿಕ್ಷಣ'ವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಸುರೇಶ್ ಅವರು, ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ನಂತರ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಬಾರದು ಎಂಬ ಕಾರಣಕ್ಕಾಗಿ ವೃತ್ತಿಶಿಕ್ಷಣವನ್ನೂ ಕಲಿಸುತ್ತಿದ್ದಾರೆ. ಇದರಲ್ಲಿ ಫೋಮ್ ಕಲೆ, ಕ್ರಾಫ್ಟ್ ಕಲೆ, ಗಾರೆ ಕೆಲಸ, ಗೋಡೆಗಳಿಗೆ ಬಣ್ಣ ಬಳಿಯುವ ಕಲೆಯನ್ನು ಪ್ರಮುಖವಾದವು.

ಶಾಲಾ ಕಾಂಪೌಂಡ್ ಹಾಗೂ ತೋಟದ ಇಕ್ಕೆಲದ ದಂಡೆಗಲ್ಲಿನ ಪೈಂಟಿಂಗ್,

ಔಪಚಾರಿಕ ಕಲಿಕೆಯ ಜೊತೆಗೆ ಮಕ್ಕಳಿಗೆ ಶಾಡೋಪ್ಲೇ, ಕನ್ನಡಿ ಬರಹ, ಪಿಯಾನೋ ಕೀಬೋರ್ಡ್ ಕಲಿಕೆ, ನಾಟಕಾಭಿನಯ, ಥರ್ಮೋಫೋಮ್-ಪೇಪರ್ ಕ್ರಾಫ್ಟ್ ಕಾರ್ಯಾಗಾರಗಳು, ತೋಟಗಾರಿಕೆ ಶಿಕ್ಷಣ, ಪ್ಲಬಿಂಗ್ ಶಿಕ್ಷಣ, ಚಿತ್ರಕಲೆ, ಗೋಡೆ ಪೈಂಟಿಂಗ್, ಸಂಗೀತ ಮೊದಲಾದವಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಸಕಲಕಲಾವಲ್ಲಭರಾಗಿದ್ದಾರೆ.

ಸ್ವತಃ ಶ್ಯಾಡೋಪ್ಲೇ ಕಲಾವಿದರಾಗಿ ರುವ ಶಿಕ್ಷಕ ಸುರೇಶ ಮರಕಾಲ ಅವರು, ತಮ್ಮ ಶಿಷ್ಯ ವೃಂದ್ಯಕ್ಕೂ ಅದನ್ನು ಧಾರೆ ಎರೆಯುತ್ತಿದ್ದಾರೆ. ಪರಿಣಾಮ ಶಾಲೆಯ ಬಹುತೇಕ ಮಕ್ಕಳು ಇಂದು ಶ್ಯಾಡೋಪ್ಲೇ (ಕೈಬೆರಳ ನೆರಳಾಟ)ನಲ್ಲಿ ಪ್ರತಿಭೆಯನ್ನು ಓರೆಗೆ ಹಚ್ಚುತ್ತಿದ್ದಾರೆ. 8ರಿಂದ 10ನೇ ತರಗತಿಯ ಬಹುತೇಕ ಎಲ್ಲಾ ಮಕ್ಕಳು ಕನ್ನಡಿ ಬರಹವನ್ನು ಇವರಿಂದ ಕಲಿತಿದ್ದಾರೆ.

ಶಾಲೆಯಲ್ಲಿ ಪರಿಸರ ಸ್ನೇಹಿ 'ತೋಟಗಾರಿಕಾ ಶಿಕ್ಷಣ'ವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಸುರೇಶ್ ಅವರು, ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ನಂತರ ಉದ್ಯೋಗ ಸಿಗದೆ ನಿರುದ್ಯೋಗಿಗಳಾಗಬಾರದು ಎಂಬ ಕಾರಣಕ್ಕಾಗಿ ವೃತ್ತಿಶಿಕ್ಷಣವನ್ನೂ ಕಲಿಸುತ್ತಿದ್ದಾರೆ. ಇದರಲ್ಲಿ ಫೋಮ್ ಕಲೆ, ಕ್ರಾಫ್ಟ್ ಕಲೆ, ಗಾರೆ ಕೆಲಸ, ಗೋಡೆಗಳಿಗೆ ಬಣ್ಣ ಬಳಿಯುವ ಕಲೆಯನ್ನು ಪ್ರಮುಖವಾದವು.

ಶಾಲಾ ಕಾಂಪೌಂಡ್ ಹಾಗೂ ತೋಟದ ಇಕ್ಕೆಲದ ದಂಡೆಗಲ್ಲಿನ ಪೈಂಟಿಂಗ್, ಸರದಾರರೂ ಆಗಿದ್ದು, ಉತ್ತಮ ಸಾಹಿತಿಯೂ ಆಗಿದ್ದಾರೆ. ಶಾಲೆಯಲ್ಲಿಯೂ ಇವರು ವಿದ್ಯಾರ್ಥಿಗಳ ಬರವಣಿಗೆಗೆ ಇಂಬು ನೀಡುವದಕ್ಕಾಗಿ 'ಚಿಣ್ಣರ ಪಲ್ಲಕ್ಕಿ' ಎಂಬ ಗೋಡೆ ಪತ್ರಿಕೆಯನ್ನೂ ಆರಂಭಿಸಿದ್ದಾರೆ. ಮಕ್ಕಳ ಬರವಣಿಗೆ ಕೇವಲ ಶಾಲೆಗೆ ಮಾತ್ರ ಸೀಮಿತವಾಗಿರದೆ, ಸಮಾಜಕ್ಕೂ ತಿಳಿಯಬೇಕೆಂಬ ಅಭಿಲಾಷೆಯೊಂದಿಗೆ ಎಂಬ ಹೆಸರಿನಲ್ಲಿ 'ಬ್ಲಾಗ್‍ಪೇಜ್' ನ್ನೂ ರಚಿಸಿದ್ದಾರೆ.

ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು, ಸಾಯ್ಬರಕಟ್ಟೆಯ ರೈತ ಕುಟುಂಬವಾದ ಲಕ್ಷ್ಮಣ ಹಾಗೂ ತುಂಗಾ ದಂಪತಿಗಳ ಪುತ್ರರಾಗಿರುವ ಸುರೇಶ್ ಮರಪಾಲ ಅವರ ಪತ್ನಿ ಪ್ರತಿಮಾ ಅವರು ಮುದ್ರಾಡಿಯಲ್ಲಿ ಸಿ.ಆರ್.ಪಿ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿ.ಎಡ್.ನಲ್ಲಿ ಪ್ರಥಮ ಶ್ರೇಣಿಯೊಂದಿಗೆ 4 ಚಿನ್ನದ ಪದಕಗಳನ್ನು ಪಡೆಯುವದರೊಂದಿಗೆ 2010ರಲ್ಲಿ ಪ್ರಧಾನ ಮಂತ್ರಿ ಪುರಸ್ಕಾರಕ್ಕೂ ಭಾಜನರಾಗಿರುವ ಸುರೇಶ್ ಅವರಿಗೆ ಇಂದು 2ನೇ ಬಾರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ. ಅಂದು ಬಿ.ಎಡ್.ನಲ್ಲಿ ಪ್ರಶಸ್ತಿ ಪಡೆದಿದ್ದರೆ ಇಂದು ಶಿಕ್ಷಕನಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯ ಸಂತಸವನ್ನು ‘ಶಕ್ತಿ'ಯೊಂದಿಗೆ ಹಂಚಿಕೊಂಡ ಸುರೇಶ್ ಅವರು, ರಾಷ್ಟ್ರಮಟ್ಟದಲ್ಲಿ ಸಿಕ್ಕಿರುವ ಈ ಪ್ರಶಸ್ತಿಯನ್ನು ನನ್ನ ಶಾಲೆಯ ಮುದ್ದು ಮಕ್ಕಳಿಗೆ ಆದ್ಯಂತವಾಗಿ ಸಮರ್ಪಿಸುತ್ತೇನೆ. ಅವರ ಕೊಡುಗೆ ಇಲ್ಲದೇ ಹೋಗುತ್ತಿದ್ದರೆ ನನಗೆ ಇದು ಸಾಧ್ಯವೇ ಆಗುತ್ತಿರಲಿಲ್ಲ. ನನ್ನ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರನ್ನು ಈ ಕ್ಷಣದಲ್ಲಿ ನೆನೆಯುತ್ತೇನೆ. ಇಲಾಖೆಯ ಮೇಲಧಿಕಾರಿಗಳ ಪ್ರೋತ್ಸಾಹದಿಂದಲೇ ಇದೆಲ್ಲ ಸಾಧ್ಯವಾಯಿತು. ನನ್ನ ಸೋಲು-ಗೆಲವುಗಳಲ್ಲಿ ಸದಾ ಭಾಗಿಯಾಗಿರುವ ಪೋಷಕರು, ಪತ್ನಿ ಮತ್ತು ಮಗನ ಸಹಕಾರವೂ ಮುಖ್ಯವಾಗಿದೆ. ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಿಸಿದ್ದಾರೆ. ಸೆಪ್ಟೆಂಬರ್ 5ರಂದು ದೆಹಲಿಯಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸುರೇಶ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.