ಮಡಿಕೇರಿ, ಆ. 28: ಮೈಸೂರಿನ ಮೈಸೂರು ಮಿರಾಕಲ್ಸ್‍ನ 16ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಮೈಮಿ ಫೆಸ್ಟ್‍ನಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯಸಂಸ್ಥೆ ಪ್ರಥಮ ಸ್ಥಾನ ಗಳಿಸುವದರೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ. ಮೈಸೂರಿನ ಜಗನ್‍ಮೋಹನ್ ಪ್ಯಾಲೇಸ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ನೃತ್ಯ ತಂಡಗಳು ಭಾಗವಹಿಸಿದ್ದು, ಜೂನಿಯರ್ ವಿಭಾಗದಲ್ಲಿ ಕಿಂಗ್ಸ್ ಆಫ್ ಕೂರ್ಗ್‍ನ ನೃತ್ಯ ಸಂಯೋಜಕ ಮಹೇಶ್ ನೇತೃತ್ವದಲ್ಲಿ ಕಲಾವಿದರು ಪ್ರದರ್ಶಿಸಿದ ನೃತ್ಯ ರೂಪಕ ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ. ಈ ಹಿಂದೆ ನಡೆದ ಎರಡೂ ಸ್ಪರ್ಧೆಗಳಲ್ಲಿಯೂ ಕಿಂಗ್ಸ್ ತಂಡ ಸತತವಾಗಿ ಪ್ರಥಮ ಬಹುಮಾನ ಗಳಿಸಿತ್ತು.