ಚೆಟ್ಟಳ್ಳಿ, ಆ. 28: ‘ನ್ಯಾಶನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಯಿಂಡ್ ಎಜುಕೇಶನ್ ರಿಜಿಸ್ಟ್ ಅಂಡರ್ ಎನ್ಐಟಿಐ ಆಯೋಗ್ ಗೌರ್ನಮೆಂಟ್ ಆಫ್ ಇಂಡಿಯ ಅಯಿಂಡ್ ರಿಜಿಸ್ಟರ್ವಿತ್ ಯುನೈಟೆಡ್ ನೇಶನ್ ಆರ್ಗನೈಜೇಶನ್ ಆಫ್ ಜಿನೆವಾ’ ಸಂಸ್ಥೆ ಸಮಾಜಸೇವೆ, ಆರೋಗ್ಯ ಸೇವೆ ಹಾಗೂ ಪರ್ಯಾಯ ವೈದಕೀಯ ಸೇವೆಗಳÀಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚೆಟ್ಟಳ್ಳಿಯ ಮುಳ್ಳಂಡ ಕಾವೇರಪ್ಪ(ಕರಣ್)ನಿಗೆ ಎನ್ಐಟಿಐ ಸಂಸ್ಥೆಯ 2019ನೇ ಸಾಲಿನ ವಾರ್ಷಿಕ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿದೆ.
ಮೈಸೂರಿನ ಕಲಾಮಂದಿರದಲ್ಲಿ ನಡೆದ ಎನ್ಐಟಿಐ ಸಂಸ್ಥೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 108 ಸಾಧಕರಿಗೆ ಕೆಎಂಎಫ್ನ ಮನೋಕರ್ ಗೌಡ, ಎನ್ಐಟಿ ಆಯೋಗ್ನ ರಾಷ್ಟ್ರೀಯ ಮುಖ್ಯಸ್ಥ ಡಾ. ಸಂಜೀವ್ ಲಾಲ್ ಬನ್ಸಾಲ್, ವಿಶ್ವವಿದ್ಯಾನಿಲಯದ ಮುಖ್ಯಸ್ಥ ಸುಂದರ್ ಸಿಂಗ್ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಇವರು ಚೆಟ್ಟಳ್ಳಿಯವರಾದ ದಿ. ಮುಳ್ಳಂಡ ಕೆ. ಜೋಯಪ್ಪ ಹಾಗೂ ಪ್ರೇಮ ಜೋಯಪ್ಪ ಅವರ ಪುತ್ರ. ಬೆಂಗಳೂರಿನ ವೇದಮ್ ಮತ್ತು ಓeóÉೂೀನ್ ಹೆಲ್ತ್ಕೇರ್ ಸೆಂಟರ್ನಲ್ಲಿ ನಿಸರ್ಗ ಚಿಕ್ಸಿತೆಯ ಕಾರ್ಯವಿಧಾನವಾದ ಪಂಚಕರ್ಮ, ರೇಖಿ ಚಿಕ್ಸಿತೆ, ಸುಜೋಕ್ ತೆರಪಿ, ಮ್ಯೂಸಿಕಲ್ ಹೀಲಿಂಗ್, ಕಪ್ ತೆರಪಿ ಹೀಗೆ ಹಲವು ಪ್ರಕೃತಿ ಚಿಕ್ಸಿತಾ ಪದ್ಧತಿಗಳನ್ನು ಕಲಿತ. ಟಿಯಾನ್ಸ್ಗ್ಲೋಬಲ್ ಸಂಸ್ಥೆಯÀಲ್ಲಿ ಅಸೋಸಿಯೇಟ್ ಆಗಿ ಸೇವೆಸಲ್ಲಿಸುತ್ತಾ ನುರಿತ ಹಲವು ವೈದ್ಯರುಗಳ ಸಲಹೆ ಹಾಗೂ ಸೂಚನೆಯ ಮೂಲಕ ವೈಯಕ್ತಿಕ ಚಿಕಿತ್ಸೆ, ಹಲವು ಆರೋಗ್ಯಕರ ಚಿಕಿತ್ಸೆಗಳು, ಸೌಂದರ್ಯ ಚಿಕ್ಸಿತೆ ನೀಡುತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾವೇರಪ್ಪ ನೀಡಿದ ಚಿಕಿತ್ಸಾ ವಿಧಾನ ಹಾಗೂ ಹಲವರು ಗುಣಮುಖರಾದ ಫಲವಾಗಿ ಮೂಲ ದಾಖಲೆಗಳೊಂದಿಗೆ ನ್ಯಾಶನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಯಿಂಡ್ ಎಜುಕೇಶನ್ ಸಂಸ್ಥೆ(ಎನ್ಐಟಿಐ)ಗೆ ಸಂಪೂರ್ಣ ವರದಿ ಹಾಗೂ ಆರೋಗ್ಯ ಸೇವಾ ಮಾಹಿತಿಯನ್ನು ಸಲ್ಲಿಸಲಾಗಿತ್ತು. ಸೇವೆ ಹಾಗೂ ವರದಿಯನ್ನು ಆÀದರಿಸಿ ಗೌರವ ಡಾಕ್ಟರೇಟನ್ನು ನೀಡಿ ಗೌರವಿಸಿದ್ದಾರೆಂದು ಮುಳ್ಳಂಡ ಕರಣ್ ಕಾವೇರಪ್ಪ ಹೇಳಿದ್ದಾರೆ.
- ಪುತ್ತರಿರ ಕರುಣ್ ಕಾಳಯ್ಯ